alex Certify
ಕನ್ನಡ ದುನಿಯಾ       Mobile App
       

Kannada Duniya

ಅನಂತನ ಸನ್ನಿಧಿಯಲ್ಲಿ ನಾಪತ್ತೆಯಾಗಿದೆ 186 ಕೋಟಿ ರೂ. ಚಿನ್ನ!

shocking-769-gold-pots-worth-rs-186-crore-missing-from-padmanabhaswamy-temple-in-keralaನವದೆಹಲಿ: ಜಗತ್ತಿನ ಅತ್ಯಂತ ಶ್ರೀಮಂತ ದೇವರುಗಳ ಪೈಕಿ ಒಂದೆನಿಸಿರುವ ಕೇರಳದ ತಿರುವನಂತಪುರದ ಅನಂತಪದ್ಮನಾಭ ದೇವಾಲಯದಲ್ಲಿ 186 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಲಾಗಿದೆ. 1166 ಚಿನ್ನದ ಬಿಂದಿಗೆಗಳ ಪೈಕಿ 769 ಮಡಕೆಗಳಲ್ಲಿದ್ದ 776 ಕೆ.ಜಿ. ಚಿನ್ನಾಭರಣ ಕಳುವಾಗಿದೆ.

2015 ರಲ್ಲೇ ಅನಂತಪದ್ಮನಾಭ ಸ್ವಾಮಿ ದೇಗುಲದ ವ್ಯವಹಾರಗಳ ಕುರಿತು ವರದಿ ಸಲ್ಲಿಸಬೇಕೆಂದು ಮಾಜಿ ಮಹಾಲೇಖಪಾಲ ವಿನೋಧ್ ರೈ ಅವರ ಸಮಿತಿಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದೇಶದ ಅನ್ವಯ ತನಿಖೆ ನಡೆಸಿದ ಸಮಿತಿ ಹಲವು ಅವ್ಯವಹಾರಗಳನ್ನು ಬಯಲಿಗೆಳೆದಿತ್ತು.

ಸಮಿತಿ ಹೇಳಿದ ಮಾಹಿತಿಯ ಪ್ರಕಾರ ದೇಗುಲದಲ್ಲಿನ ಅಪಾರ ಪ್ರಮಾಣದ ಆಭರಣಗಳು ನಾಪತ್ತೆಯಾಗಿದ್ದವು. ಹಿಂದೆ 2012ರಲ್ಲಿ ಕೂಡ ಮಾಜಿ ಐಪಿಎಸ್ ಅಧಿಕಾರಿ ಟಿ.ಪಿ. ಸುಂದರ್ ರಾಜನ್ ಅವರು ಅನಂತಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿ ಇರುವ ಬೃಹತ್ ನಿಧಿಯನ್ನು ತೆರೆಸಿ ಲೆಕ್ಕಹಾಕಬೇಕೆಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

150 ವರ್ಷದ ನಂತರ 2012 ರಲ್ಲಿ ಅನಂತಪದ್ಮನಾಭಸ್ವಾಮಿ ದೇವಾಲಯದ ನೆಲಮಾಳಿಗೆಯನ್ನು ತೆರೆದು ಸಂಪತ್ತಿನ ದಾಖಲೀಕರಣ ಮಾಡಲಾಗಿತ್ತು. ಸಂಪತ್ತಿನ ದಾಖಲೀಕರಣ ವೇಳೆಯಲ್ಲಿ ಸುಮಾರು ಸಾವಿರಾರು ಕೋಟಿ ರೂ. ಗಳಿಗಿಂತಲೂ ಅಧಿಕ ಮೌಲ್ಯದ ಚಿನ್ನಾಭರಣಗಳಿವೆ ಎಂದು ಅಂದಾಜಿಸಲಾಗಿತ್ತು. ತಪಾಸಣೆಯ ನಂತರ ದೇಗುಲದ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...