alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಮ್ ವರ್ಕ್ ಮಾಡದ ವಿದ್ಯಾರ್ಥಿನಿಗೆ ಇಂಥಾ ಶಿಕ್ಷೆ…!

ಮಧ್ಯಪ್ರದೇಶದ ರೆಸಿಡೆನ್ಷಿಯಲ್ ಸ್ಕೂಲ್ ನಲ್ಲಿ ಶಿಕ್ಷಕಿಯ ಆದೇಶದ ಮೇರೆಗೆ 12 ವರ್ಷದ ಬಾಲಕಿಗೆ ಆಕೆಯ ಸಹಪಾಠಿಗಳು 168 ಬಾರಿ ಕಪಾಳಕ್ಕೆ ಬಾರಿಸಿದ್ದಾರೆ. ಸತತ 6 ದಿನಗಳ ಕಾಲ ವಿದ್ಯಾರ್ಥಿನಿಗೆ ಈ ಶಿಕ್ಷೆ ನೀಡಲಾಗಿದೆ. ಈ ಬಗ್ಗೆ ಬಾಲಕಿಯ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ.

ಆದ್ರೆ ಬಾಲಕಿಗೆ ಸ್ನೇಹದಿಂದ ಕೊಟ್ಟಿರುವ ಶಿಕ್ಷೆ ಇದು, ಜೋರಾಗಿ ಹೊಡೆದಿಲ್ಲ ಅಂತಾ ಶಾಲೆಯ ಪ್ರಾಂಶುಪಾಲ ಕೆ. ಸಾಗರ್ ಸಮರ್ಥಿಸಿಕೊಂಡಿದ್ದಾರೆ. ತಾಂಡ್ಲಾದಲ್ಲಿರೋ ನವೋದಯ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಹೋಮ್ ವರ್ಕ್ ಮಾಡದೇ ಇದ್ದಿದ್ದಕ್ಕೆ ಜನವರಿ 11ರಿಂದ 16ರವರೆಗೆ ಬಾಲಕಿಗೆ 168 ಬಾರಿ ಕಪಾಳಮೋಕ್ಷ ಮಾಡಲಾಗಿದೆ.

ಬಾಲಕಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ವಿಜ್ಞಾನ ಶಿಕ್ಷಕ ಮನೋಜ್ ಕುಮಾರ್ ವರ್ಮಾ ವಿದ್ಯಾರ್ಥಿನಿಗೆ ಶಿಕ್ಷೆ ನೀಡಿದ್ದರು. ಬಾಲಕಿಗೆ ಅನಾರೋಗ್ಯವಿದ್ದಿದ್ದರಿಂದ ಹೋಮ್ ವರ್ಕ್ ಮಾಡಿರಲಿಲ್ಲ, ಅದು ಶಿಕ್ಷಕರಿಗೂ ಗೊತ್ತಿತ್ತು. ಆದ್ರೂ ಅಮಾನವೀಯವಾಗಿ ವರ್ತಿಸಿದ್ದಾರೆ ಅಂತಾ ಬಾಲಕಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...