alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕನ ಶವವನ್ನು ಹೈವೇ ಪಕ್ಕ ಬಿಟ್ಟು ಹೋದ ನಿರ್ದಯಿ ಕಂಡಕ್ಟರ್

ತಮಿಳುನಾಡಿನಲ್ಲಿ ಬಸ್ ಕಂಡಕ್ಟರ್ ನೊಬ್ಬ ಅಮಾನವೀಯವಾಗಿ ವರ್ತಿಸಿದ್ದಾನೆ. ಬಸ್ ನಲ್ಲಿ ಮೃತಪಟ್ಟಿದ್ದ ಪ್ರಯಾಣಿಕನ ಶವವನ್ನು ಹೈವೇ ಪಕ್ಕ ಇಳಿಸಿ ಹೊರಟು ಹೋಗಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಇದ್ದ ಇಬ್ಬರು ಕಾರ್ಮಿಕರು ತಮಿಳುನಾಡಿಗೆ ಹೊರಟಿದ್ರು.

ಬೆಂಗಳೂರಿನಿಂದ ತಿರುವಣ್ಣಾಮಲೈಗೆ ತೆರಳುತ್ತಿದ್ದ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ರು. ಮಾರ್ಗಮಧ್ಯೆ ಅವರಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿದ್ದಾನೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸುವ ಕನಿಷ್ಟ ಸೌಜನ್ಯವನ್ನೂ ಬಸ್ ಕಂಡಕ್ಟರ್ ತೋರಿಲ್ಲ.

ಕೃಷ್ಣಗಿರಿ ಬಳಿ ರಸ್ತೆ ಪಕ್ಕದಲ್ಲೇ ಶವ ಇಳಿಸಿ ಹೊರಟು ಹೋಗಿದ್ದಾನೆ. ಆತನ ಸ್ನೇಹಿತ ಶವವನ್ನಿಟ್ಟುಕೊಂಡು ಆಂಬ್ಯುಲೆನ್ಸ್ ನಿರೀಕ್ಷೆಯಲ್ಲಿ ಕುಳಿತಿದ್ದ. ಯಾಕಂದ್ರೆ ಬಸ್ ಅಥವಾ ಇತರ ಯಾವ ವಾಹನಗಳು ಕೂಡ ಮೃತದೇಹವನ್ನು ಕೊಂಡೊಯ್ಯಲು ಒಪ್ಪಿರಲಿಲ್ಲ.

150 ರೂಪಾಯಿ ಕೊಟ್ಟು ಇಬ್ಬರೂ ಟಿಕೆಟ್ ಪಡೆದಿದ್ದರು. ಹಾಗಾಗಿ ತಮ್ಮನ್ನು ಮಧ್ಯದಾರಿಯಲ್ಲಿ ಇಳಿಸಿದ್ದು ತಪ್ಪು ಅನ್ನೋದು ಬಡ ಕಾರ್ಮಿಕನ ಅಳಲು. ಬಾಕಿ ಹಣವನ್ನು ಕೂಡ ಕೊಡದೇ ಕಂಡಕ್ಟರ್ ನಿರ್ದಯಿಯಂತೆ ವರ್ತಿಸಿರೋದು ಆತನಿಗೆ ಬೇಸರ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...