alex Certify
ಕನ್ನಡ ದುನಿಯಾ       Mobile App
       

Kannada Duniya

ಯು ಟರ್ನ್ ತೆಗೆದುಕೊಂಡ ಶಿವಸೇನೆ

modi-udhav-1

ನೋಟು ನಿಷೇಧ ವಿಚಾರದಲ್ಲಿ ಸರ್ಕಾರದ ವಿರುದ್ಧ ದನಿ ಎತ್ತಿದ್ದ ಶಿವಸೇನೆ ಈಗ ಯು ಟರ್ನ್ ಹೊಡೆದಿದೆ. ಮೋದಿ ಸರ್ಕಾರದ ಪರ ಮಾತನಾಡಲು ಶುರುಮಾಡಿದೆ. ಪ್ರಧಾನ ಮಂತ್ರಿ ಮೋದಿ ನಿರ್ಧಾರಕ್ಕೆ ತಾವು ಬದ್ಧ ಎಂಬ ಸಂದೇಶದ ಪತ್ರವನ್ನು ಸಂಸದರು ಮೋದಿಗೆ ರವಾನೆ ಮಾಡಿದ್ದಾರೆ.

ಇದಕ್ಕಿಂತ ಮೊದಲು ಇಂದು ಕೇಂದ್ರ ಸಚಿವ ನಿತಿನ್ ಗಡ್ಕರಿ, ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿದ್ದಾರೆ. ಮಗಳ ಮದುವೆಗೆ ಉದ್ಧವ್ ಠಾಕ್ರೆಯವರನ್ನು ಆಹ್ವಾನಿಸಲು ಗಡ್ಕರಿ ಬಂದಿದ್ದರು ಎನ್ನಲಾಗಿದೆ. ಆದ್ರೆ ಈ ವೇಳೆ ನೋಟಿನ ವಿಚಾರದ ಬಗ್ಗೆಯೂ ಚರ್ಚೆಯಾಗಿರುವುದು ಸ್ಪಷ್ಟವಾಗಿದೆ. ಯಾಕೆಂದ್ರೆ ಗಡ್ಕರಿ ಭೇಟಿ ನಂತ್ರ ಶಿವಸೇನೆ ಯು ಟರ್ನ್ ತೆಗೆದುಕೊಂಡಿದೆ.

ಮಮತಾ ಬ್ಯಾನರ್ಜಿ ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ನಾಯಕರ ಜೊತೆ ಪ್ರತಿಭಟನೆ ನಡೆಸುವುದಿಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸಿದೆ. ಗಡ್ಕರಿ ಭೇಟಿಗೂ ಮುನ್ನ ಬಿಜೆಪಿಯ ಅನೇಕ ನಾಯಕರು ಉದ್ಧವ್ ಠಾಕ್ರೆ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ವೆಂಕಯ್ಯ ನಾಯ್ಡು, ಠಾಕ್ರೆಗಿದ್ದ ಅನುಮಾನಗಳನ್ನು ಬಗೆಹರಿಸುವ ಯತ್ನ ಮಾಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...