alex Certify
ಕನ್ನಡ ದುನಿಯಾ       Mobile App
       

Kannada Duniya

ಥಾಣೆ ಮಾಜಿ ಮೇಯರ್ ಜೇಬಿಗೆ ಕತ್ತರಿ

pickpocketರಾಜಕೀಯ ಪಕ್ಷಗಳ ಸಭೆ- ಸಮಾರಂಭಗಳಲ್ಲಿ ಜನಜಂಗುಳಿಯ ಲಾಭ ಪಡೆಯುವ ಕಳ್ಳರು ಕೈ ಚಳಕ ತೋರಿಸುವುದು ಸಾಮಾನ್ಯ. ಇಬ್ಬರು ಪಿಕ್ ಪಾಕೇಟ್ ಚೋರರು ಥಾಣೆ ಮಾಜಿ ಮೇಯರ್ ಜೇಬಿಗೆ ಕತ್ತರಿ ಹಾಕಿ ಇದೀಗ ಸಿಕ್ಕಿ ಬಿದ್ದಿದ್ದಾರೆ.

ಮಂಗಳವಾರ ಮಧ್ಯಾಹ್ನ ಥಾಣೆ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಮೇಯರ್- ಉಪ ಮೇಯರ್ ಆಯ್ಕೆಗೆ ಸಭೆ ನಿಗದಿಯಾಗಿತ್ತು. ಈ ಸಭೆಗೆ ಮಾಜಿ ಮೇಯರ್ ಸಂಜಯ್ ಮೋರೆ ಆಗಮಿಸಿದ್ದು, ತಮ್ಮ ಕಛೇರಿಗೆ ತೆರಳುತ್ತಿದ್ದಾಗ ಶಿವಸೇನೆ ಕಾರ್ಯಕರ್ತರಂತೆ ನಟಿಸುತ್ತಿದ್ದ ಇಬ್ಬರು ಕೈಚಳಕ ತೋರಿಸಿದ್ದಾರೆ.

ಆದರೆ ಸಂಜಯ್ ಮೋರೆಯವರಿಗೆ ತಮ್ಮ ಜೇಬಿಗೆ ಕತ್ತರಿ ಬಿದ್ದಿರುವುದು ಗೊತ್ತಾಗುತ್ತಿದ್ದಂತೆಯೇ ಅಂಗರಕ್ಷಕರಿಗೆ ತಮ್ಮ ಬಳಿ ಬಂದಿದ್ದ ಇಬ್ಬರನ್ನು ಹಿಡಿಯಲು ಸೂಚಿಸಿದ್ದಾರೆ. ಅದರಂತೆ ಮಾಲೆಗಾಂವ್ ಮೂಲದ ನಸ್ರುಲ್ಲಾ ಮಹಮ್ಮದ್ ಅನ್ಸಾರಿ ಹಾಗೂ ಕಮ್ರಾಲಿ ಸಯ್ಯದ್ ರನ್ನು ಹಿಡಿದು ತಪಾಸಣೆ ನಡೆಸಿದಾಗ ಸಂಜಯ್ ಮೋರೆಯವರ ಪರ್ಸ್ ಪತ್ತೆಯಾಗಿದೆ. ಇಬ್ಬರೂ ಪಿಕ್ ಪಾಕೇಟ್ ಚೋರರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...