alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಸಂಸದ

mp

ಬ್ಯುಸಿನೆಸ್ ಕ್ಲಾಸ್ ಸೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದರೊಬ್ರು ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅಷ್ಟೇ ಅಲ್ಲ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಆತ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ, ನಾನು ಅವನಿಗೆ 25 ಬಾರಿ ಹೊಡೆದಿದ್ದೇನೆ ಅಂತಾ ನಾಚಿಕೆಯಿಲ್ಲದೇ ಹೇಳಿಕೊಂಡಿದ್ದಾರೆ. ನಾನು ಶಿವಸೇನೆಯ ಸಂಸದ, ಬಿಜೆಪಿಯವನಲ್ಲ. ಯಾರಿಂದಲೂ ಬೈಗುಳ ಕೇಳುವುದಿಲ್ಲ ಅಂತಾ ದರ್ಪದಿಂದ ನುಡಿದಿದ್ದಾರೆ.

ಅಷ್ಟಕ್ಕೂ ದುರ್ವರ್ತನೆ ತೋರಿದ ಸಂಸದ ಯಾರು ಗೊತ್ತಾ? ರವೀಂದ್ರ ಗಾಯಕ್ವಾಡ್. ಪುಣೆಯಿಂದ ದೆಹಲಿಗೆ ಹೊರಟಿದ್ದ ಗಾಯಕ್ವಾಡ್ ಸೀಟಿನ ವಿಷಯಕ್ಕೆ ತಗಾದೆ ಶುರುಮಾಡಿದ್ದಾರೆ. ತಾನು ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಖರೀದಿಸಿದ್ದು, ಏರ್ ಇಂಡಿಯಾ ಎಕಾನಮಿ ಕ್ಲಾಸ್ ನಲ್ಲಿ ಸೀಟ್ ಅರೇಂಜ್ ಮಾಡಿದೆ ಅನ್ನೋದು ಅವರ ಆರೋಪ.

ಇದೇ ವಿಚಾರಕ್ಕೆ ಜಗಳ ಮಾಡಿದ ಸಂಸದ, ಏರ್ ಇಂಡಿಯಾ ಸಿಬ್ಬಂದಿ ಸುಕುಮಾರ್ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಆತನ ಕನ್ನಡಕವನ್ನೂ ಒಡೆದು ಹಾಕಿದ್ದಾರೆ. ಈ ಘಟನೆ ಬಗ್ಗೆ ತನಿಖೆ ಮಾಡಲು ಏರ್ ಇಂಡಿಯಾ ತಂಡವೊಂದನ್ನು ರಚನೆ ಮಾಡಿದೆ. ಯಾವುದೇ ರಾಜಕೀಯ ಪಕ್ಷದವರಿಗೂ ಈ ರೀತಿ ದೈಹಿಕ ಹಲ್ಲೆ ನಡೆಸಲು ಅಧಿಕಾರವಿಲ್ಲ ಅಂತಾ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಕೂಡ ಸ್ಪಷ್ಟಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...