alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ಪಾಲಿಕೆಗೆ ನೂತನ ಮೇಯರ್ ಆಯ್ಕೆ..

vishwanath-mahadeshwar-mumbai-mayor_650x400_41488969486

ಅತಿ ಶ್ರೀಮಂತ ಮಹಾನಗರ ಪಾಲಿಕೆ ಎನಿಸಿಕೊಂಡಿರುವ ಮುಂಬೈಗೆ ನೂತನ ಮೇಯರ್ ಆಯ್ಕೆಯಾಗಿದ್ದಾರೆ. ಶಿವಸೇನೆಯ ಕಾರ್ಪೊರೇಟರ್ ವಿಶ್ವನಾಥ್ ಮಹದೇಶ್ವರ್ ಬಿಎಂಸಿಯ ಚುಕ್ಕಾಣಿ ಹಿಡಿದಿದ್ದಾರೆ. ಬಿಎಂಸಿ ಚುನಾವಣೆಯಲ್ಲಿ ಮಿತ್ರಪಕ್ಷಗಳಾದ ಶಿವಸೇನೆ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.

ಸಮಬಲದ ಫಲಿತಾಂಶವನ್ನೂ ಪಡೆದಿದ್ದವು. ಆದ್ರೆ ಬಿಜೆಪಿ ಮೇಯರ್ ಸ್ಥಾನಕ್ಕಾಗಿ ಪೈಪೋಟಿ ಒಡ್ಡದೇ ಶಿವಸೇನೆಗೆ ಬಿಟ್ಟುಕೊಟ್ಟಿದೆ. ಎರಡು ದಶಕಗಳ ದೋಸ್ತಿಗೆ ಎಳ್ಳುನೀರು ಬಿಡುವ ಸಮಯ ಬಂದಿದೆ ಅಂತಾ ಶಿವಸೇನೆಯ ಉದ್ಧವ್ ಠಾಕ್ರೆ ಈಗಾಗ್ಲೇ ಹಲವು ಬಾರಿ ಹೇಳಿಕೆ ನೀಡಿದ್ದಾರೆ.

ಮೇಯರ ಪದಗ್ರಹಣ ಸಮಾರಂಭದಲ್ಲೂ ಬಿಜೆಪಿ-ಶಿವಸೇನೆ ನಡುವಣ ಒಡಕು ಬಹಿರಂಗವಾಗಿದೆ. ಬಿಜೆಪಿಯ ಕಾರ್ಪೊರೇಟರ್ ಗಳು ಮೋದಿ ಮೋದಿ ಅಂತಾ ಘೋಷಣೆ ಕೂಗ್ತಾ ಇದ್ರೆ, ಶಿವಸೇನೆಯವರೆಲ್ಲ ಜೈ ಬಾಳಾ ಸಾಹೇಬ್ ಎನ್ನುತ್ತಿದ್ರು. ಕಳೆದ ತಿಂಗಳು ನಡೆದ ಬಿಎಂಸಿ ಚುನಾವಣೆಯಲ್ಲಿ ಶಿವಸೇಸೆ 84 ಸ್ಥಾನಗಳನ್ನು ಗೆದ್ದಿತ್ತು. 82 ಸೀಟುಗಳು ಬಿಜೆಪಿ ಪಾಲಾಗಿದ್ದವು. 227 ಸ್ಥಾನಗಳ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲು 114 ಸ್ಥಾನಗಳ ಅವಶ್ಯಕತೆಯಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...