alex Certify
ಕನ್ನಡ ದುನಿಯಾ       Mobile App
       

Kannada Duniya

‘ಪ್ರೇಮಿಗಳ ದಿನ’ ದಂದು ಸಿಕ್ಕಿ ಬಿದ್ದ ಯುವ ಜೋಡಿಗೆ ಮಾಡಿದ್ದೇನು..?

Valentines day

ಈ ಬಾರಿಯ ‘ಪ್ರೇಮಿಗಳ ದಿನ’ ದಂದು ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕಾರ್ಯ ಮಾಡಬಾರದೆಂದು ಶಿವಸೇನಾ ವರಿಷ್ಟರು ತಿಳಿಸಿದ್ದರೂ ಸಹ ಪಾರ್ಕಿನಲ್ಲಿ ಕುಳಿತಿದ್ದ ಯುವ ಜೋಡಿಯನ್ನು ಹಿಡಿದ ಶಿವಸೇನೆ ಯುವ ಘಟಕದ ಕಾರ್ಯಕರ್ತರು ಪರಸ್ಪರ ಮಾಲಾರ್ಪಣೆ ಮಾಡಿಸಿದ ಘಟನೆ ನಡೆದಿದೆ.

ಛತ್ತೀಸ್ ಘಡದ ಕೊರ್ಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ದಾರ್ರಿ ಏರಿಯಾದ ಭವಾನಿ ದೇವಾಲಯದ ಪಾರ್ಕ್ ಬಳಿ ಯುವ ಜೋಡಿಯೊಂದು ಕುಳಿತಿತ್ತು. ಆಗ ಅಲ್ಲಿಗೆ ಆಗಮಿಸಿದ ಶಿವಸೇನೆ ಯುವ ಘಟಕದ ಕಾರ್ಯಕರ್ತರನ್ನು ಕಂಡ ಜೋಡಿ ಪರಾರಿಯಾಗಲು ಯತ್ನಿಸಿತು. ಆದರೂ ಕಾರ್ಯಕರ್ತರಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಸಿಕ್ಕಿ ಬಿದ್ದ ಜೋಡಿಗೆ ರಾಖಿ ಕಟ್ಟುವಂತೆ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಯುವಕ ತಾವಿಬ್ಬರು ಪ್ರೀತಿಸುತ್ತಿದ್ದು, ಈಗಾಗಲೇ ನಿಶ್ಚಿತಾರ್ಥವಾಗಿದೆ ಎಂದು ತಿಳಿಸಿದ್ದಾನೆ. ಆದರೆ ಆ ಮಾತಿಗೆ ಮಣಿಯದ ಕಾರ್ಯಕರ್ತರು ಪರಸ್ಪರ ಮಾಲೆ ಬದಲಾಯಿಸಿಕೊಳ್ಳುವಂತೆ ಪಟ್ಟು ಹಿಡಿದಿದ್ದಾರೆ. ಅದರಂತೆ ಮಾಲೆ ತಂದು ಕೊಟ್ಟ ವೇಳೆ ಯುವ ಜೋಡಿ ಪರಸ್ಪರ ಮಾಲೆ ಹಾಕಿದ್ದು, ಈ ದೃಶ್ಯದ ಫೋಟೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಶಿವಸೇನೆ ಯುವ ಘಟಕದ ಕಾರ್ಯಕರ್ತರಿಂದ ತಮಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಯುವ ಜೋಡಿ ಈಗ ಪೊಲೀಸರಿಗೆ ದೂರು ನೀಡಲು ಮುಂದಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...