alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ಪೊರೇಟರ್ ಮೇಲೆ ತೆಂಗಿನಕಾಯಿಯಿಂದ ಹಲ್ಲೆ

sarita

ಮುಂಬೈ: ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಹಳೆಯದಾಯ್ತು. ಈಗಂತೂ ಕೆಲವರು ದಿನವಿಡೀ ಜಗಳವಾಡುವುದನ್ನು ಕಾಣಬಹುದಾಗಿದೆ.

ಕಾರ್ಪೊರೇಟರ್ ಒಬ್ಬರ ಮೇಲೆ ಆಕೆಯ ಪತಿರಾಯ, ತೆಂಗಿನ ಕಾಯಿಯಿಂದ ಹಲ್ಲೆ ನಡೆಸಿದ ಘಟನೆ ಥಾಣೆಯಲ್ಲಿ ನಡೆದಿದೆ.

ಶಿವಸೇನಾ ಕಾರ್ಪೊರೇಟರ್ ಸಂಗೀತಾ ಪಾಟೀಲ್ ಥಾಣೆಯ ವಾಗ್ಲೇ ಎಸ್ಟೇಟ್ ವಾರ್ಡ್ ಪ್ರತಿನಿಧಿಸುತ್ತಿದ್ದು, ಅವರ ಮೇಲೆ ಗಂಡ ಮಾಣಿಕ್ ಪಾಟೀಲ್ ತೆಂಗಿನ ಕಾಯಿಯಿಂದ ಹಲ್ಲೆ ಮಾಡಿದ್ದಾರೆ.

ಈ ಕುರಿತು ಸರಿತಾ ಪಾಟೀಲ್ ಗಂಡನ ವಿರುದ್ಧ ಶಾಂತಿನಗರ ಠಾಣೆಗೆ ದೂರು ನೀಡಿದ್ದಾರೆ.

ದಂಪತಿ ವಿಚ್ಛೇದನಕ್ಕಾಗಿ ಈಗಾಗಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಭಾನುವಾರ ಸಂಗೀತಾ ಪಾಟೀಲ್ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾಣಿಕ್ ಪಾಟೀಲ್ ಕೂಡ ಬಂದಿದ್ದು, ಇಬ್ಬರ ನಡುವೆ ಅಲ್ಲಿಯೇ ಜಗಳ ಆರಂಭವಾಗಿದೆ.

ಸಿಟ್ಟಿನಲ್ಲಿದ್ದ ಮಾಣಿಕ್ ಪಾಟೀಲ್ ತೆಂಗಿನ ಕಾಯಿಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...