alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ ಮಿಷನ್ 2019 ಗೆ ಅಡ್ಡಿಯಾಗ್ತಿದೆ ಶಿವಸೇನೆ

ಮಹಾರಾಷ್ಟ್ರದಲ್ಲಿ ಬಿಜೆಪಿ ಮಿತ್ರಪಕ್ಷ ಶಿವಸೇನೆ ಮತ್ತೊಮ್ಮೆ ಬಿಜೆಪಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸಿದೆ. ಇದು 2019ರ ಸಾರ್ವತ್ರಿಕ ಚುನಾವಣೆ ಬಿಜೆಪಿ ಮಷಿನ್ ಗೆ ಅಡ್ಡಿಯುಂಟು ಮಾಡುವ ಸಂಕೇತ ನೀಡಿದೆ.

ಮಹಾರಾಷ್ಟ್ರದಲ್ಲಿ ಏಕಾಂಗಿಯಾಗಿ ಚುನಾವಣೆ ಸ್ಪರ್ಧಿಸುವ ಘೋಷಣೆಯನ್ನು ಶಿವಸೇನೆ ಮಾಡಿದೆ. 2014 ರಲ್ಲಾದ ತಪ್ಪು 2019ರಲ್ಲಿ ನಡೆಯುವುದಿಲ್ಲವೆಂದು ಶಿವಸೇನೆ ಹೇಳಿದೆ. ದೆಹಲಿ ಸಿಂಹಾಸನದಲ್ಲಿ ಯಾರು ಕುಳಿತುಕೊಳ್ತಾರೆ ಎಂಬುದನ್ನು ನಿರ್ಧರಿಸುವ ಶಕ್ತಿ ಶಿವಸೇನೆಗಿದೆ. ಸಾಮ್ನಾ ಪತ್ರಿಕೆ ಸಂಪಾದಕೀಯ, ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ಏನೂ ಸರಿಯಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ.

ಕೆಲ ದಿನಗಳ ಹಿಂದೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿಯಾಗಿದ್ದರು. ಬಿಜೆಪಿ-ಶಿವಸೇನೆ ಮಧ್ಯೆಯಿದ್ದ ಭಿನ್ನಮತ ಶಮನವಾಗಿದೆ ಎನ್ನಲಾಗಿತ್ತು. ಸಾಮ್ನಾದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆಯೂ ಕಿಡಿಕಾರಲಾಗಿದೆ. ದೇಶದಲ್ಲಿ ಧೂಳಿನ ಚಂಡಮಾರುತವೆದ್ದಿದೆ. ಮೋದಿ ವಿದೇಶಿ ಪ್ರವಾಸದಲ್ಲಿ ಮಗ್ನರಾಗಿರುವ ಕಾರಣ ಧೂಳಿನ ಕಣ ಅವ್ರ ಕಣ್ಣಿಗೆ ಹೋಗ್ತಿಲ್ಲವೆಂದು ವ್ಯಂಗ್ಯ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...