alex Certify
ಕನ್ನಡ ದುನಿಯಾ       Mobile App
       

Kannada Duniya

ಮತದಾರರ ಪಟ್ಟಿಯಲ್ಲಿ ಶಿರಡಿ ಸಾಯಿಬಾಬಾ…!

ಅಂತರ್ಜಾಲದ ಮೂಲಕ ಮತದಾರರ ಪಟ್ಟಿಯಲ್ಲಿ ಶಿರಡಿ ಸಾಯಿಬಾಬಾರ ಹೆಸರನ್ನು ಸೇರಿಸಲು ಅಪರಿಚಿತ ವ್ಯಕ್ತಿಯೋರ್ವ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಅಹ್ಮದ್‌ ನಗರದಲ್ಲಿ ನಡೆದಿದೆ.

ಆನ್ ಲೈನ್ ಫಾರ್ಮ್ ನಲ್ಲಿ ಸಾಯಿಬಾಬಾ ವಿಳಾಸವಾಗಿ ಶಿರಡಿ ದೇವಸ್ಥಾನದ ವಿಳಾಸವನ್ನು ನಮೂದಿಸಲಾಗಿದ್ದು, ವಯಸ್ಸು 24, ತಂದೆಯ ಹೆಸರು ರಾಮ್ ಎಂದು ಉಲ್ಲೇಖಿಸಲಾಗಿದೆ. ಆನ್‌ಲೈನ್ ಅರ್ಜಿಗಳನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಈ ಅಕ್ರಮವನ್ನು ಅರಿತು ಚುನಾವಣಾ ಅಧಿಕಾರಿ ನಯಾಬ್ ರಹತಾ, ಸಚಿನ್ ಮಾಸ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಸೆಂಬರ್ ನಲ್ಲಿ ಅರ್ಜಿ ಹಾಕಲಾಗಿದೆ ಎಂದು ತಿಳಿದು ಬಂದಿದ್ದು, ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲು ಮಾಡಲಾಗಿದೆ. ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...