alex Certify
ಕನ್ನಡ ದುನಿಯಾ       Mobile App
       

Kannada Duniya

3 ಅಂತಸ್ತಿನ ಕಟ್ಟಡ ಕುಸಿದು 2 ಸಾವು

hrtc_2-horz

ಶಿಮ್ಲಾದಲ್ಲಿ ಮಳೆಯ ಆರ್ಭಟಕ್ಕೆ 3 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಬಸ್ ನಿಲ್ದಾಣದಲ್ಲಿದ್ದ ಹೆಚ್ ಆರ್ ಟಿ ಸಿ ಕಟ್ಟಡ ಕುಸಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆಂದು ಪ್ರಾಥಮಿಕ ಮೂಲಗಳು ಹೇಳ್ತಿವೆ. ಸುಮಾರು 6 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ವೇಳೆ ಸಾರಿಗೆ ಇಲಾಖೆ ಸಿಬ್ಬಂದಿ ಕಟ್ಟಡದೊಳಗೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಘಟನೆ ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ. ಘಟನೆ ವೇಳೆ ಕಟ್ಟಡದಲ್ಲಿ 15-20 ಮಂದಿ ಇದ್ದರು ಎನ್ನಲಾಗ್ತಿದೆ. ಗಾಯಗೊಂಡ ಆರು ಮಂದಿಯನ್ನು ಶಿಮ್ಲಾದ ಐಜಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದು ಬಹಳ ಹಳೆಯ ಕಟ್ಟಡವಾಗಿತ್ತು ಎನ್ನಲಾಗಿದೆ. ಶಿಥಿಲಗೊಂಡ ಕಟ್ಟಡದ ದುರಸ್ಥಿ ಕಾರ್ಯ ಅನೇಕ ವರ್ಷಗಳಿಂದ ನಡೆದಿರಲಿಲ್ಲ. ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಇದನ್ನು ಅಸುರಕ್ಷಿತ ಕಟ್ಟಡವೆಂದು ಸರ್ಕಾರ ಘೋಷಣೆ ಮಾಡಿತ್ತು. ಆದ್ರೂ ಅಲ್ಲಿ ಆಫೀಸ್ ನಡೆಸಲಾಗುತ್ತಿತ್ತು.

ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ಅನೇಕ ಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಆಗಸ್ಟ್ 10ರವರೆಗೂ ಮಳೆ ಮುಂದುವರೆಯಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...