alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೇ ಖಾತೆ ಕಳೆದುಕೊಂಡ ಸುರೇಶ್ ಪ್ರಭು ಹೇಳಿದ್ದೇನು?

ಕೇಂದ್ರ ರೈಲ್ವೇ ಸಚಿವರಾಗಿದ್ದ ಸುರೇಶ್ ಪ್ರಭು ತಮ್ಮ ಅಧಿಕಾರಾವಧಿಯಲ್ಲಿ ರೈಲ್ವೇ ಇಲಾಖೆಗೆ ಕಾಯಕಲ್ಪ ಕೊಡಲು ಸಾಕಷ್ಟು ಶ್ರಮಿಸಿದ್ದರು. ಆದರೆ ಈ ನಡುವೆ ನಡೆದ ಕೆಲ ರೈಲು ದುರಂತಗಳಿಂದ ನೊಂದಿದ್ದ ಸುರೇಶ್ ಪ್ರಭು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು.

ಸುರೇಶ್ ಪ್ರಭುರವರ ಕಾರ್ಯಕ್ಷಮತೆ ಕುರಿತು ಮಾಹಿತಿ ಹೊಂದಿದ್ದ ಪ್ರಧಾನಿ ನರೇಂದ್ರ ಮೋದಿ ಕೊಂಚ ಸಮಯ ಕಾಯುವಂತೆ ಸೂಚಿಸಿದ್ದರು. ಇಂದು ನಡೆದ ಸಚಿವ ಸಂಪುಟ ಪುನಾರಚನೆ ವೇಳೆ ಸುರೇಶ್ ಪ್ರಭುರವರಿಗೆ ರೈಲ್ವೇ ಖಾತೆ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ವಾಣಿಜ್ಯ ಖಾತೆ ವಹಿಸಲಾಗಿದೆ. ಪಿಯೋಶ್ ಗೋಯಲ್ ರವರಿಗೆ ರೈಲ್ವೇ ಖಾತೆ ಹೊಣೆ ವಹಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುರೇಶ್ ಪ್ರಭು, ತಮಗೆ ರೈಲ್ವೇ ಖಾತೆಯಿಂದ ವಾಣಿಜ್ಯ ಖಾತೆಗೆ ವರ್ಗಾಯಿಸಿರುವುದು ಹಿನ್ನಡೆಯಲ್ಲ. ಬದಲಾಗಿ ವಾಣಿಜ್ಯ ಖಾತೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲು ಸಿಕ್ಕ ಅವಕಾಶ ಎಂದು ಭಾವಿಸುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...