alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಕ್ಷ್ಯ ನಾಶಕ್ಕೆ ಗೂಗಲ್ ಸಹಾಯ ಪಡೆದಿದ್ದ ಮೇಜರ್ ನಿಖಿಲ್

ದೆಹಲಿ ಮೇಜರ್ ಅಮಿತ್ ದ್ವಿವೇದಿ ಪತ್ನಿ ಶೈಲಜಾ ದ್ವಿವೇದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರತಿ ದಿನ ಹೊಸ ಹೊಸ ವಿಷ್ಯಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಶೈಲಜಾ ಹತ್ಯೆ ಆರೋಪಿ ಮೇಜರ್ ನಿಖಿಲ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ನಿರಂತರ ತನಿಖೆ ನಡೆಸುತ್ತಿದ್ದಾರೆ. ತಪ್ಪೊಪ್ಪಿಕೊಂಡಿರುವ ನಿಖಿಲ್ ಕೊಲೆಗೂ ಮುನ್ನ ಸಾಕಷ್ಟು ತಯಾರಿ ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನಿಖಿಲ್ ಕೊಲೆ ನಂತ್ರ ಸಾಕ್ಷ್ಯವನ್ನು ಹೇಗೆ ನಾಶಪಡಿಸಬೇಕೆನ್ನುವ ಬಗ್ಗೆ ತಿಳಿದುಕೊಂಡಿದ್ದನಂತೆ. ಗೂಗಲ್ ನಲ್ಲಿ ಸರ್ಚ್ ಮಾಡಿ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದೆ ಎಂದು ನಿಖಿಲ್ ಹೇಳಿದ್ದಾನೆ. ಕೋಪಗೊಂಡು ನಿಖಿಲ್, ಶೈಲಜಾಳನ್ನು ಕೊಲೆ ಮಾಡಲಿಲ್ಲ. ಮೊದಲೇ ಈ ಬಗ್ಗೆ ಸಿದ್ಧತೆ ನಡೆಸಿದ್ದ ಎಂಬುದು ಗೊತ್ತಾಗಿದೆ. ಪೊಲೀಸರು ಈ ಬಗ್ಗೆ ಹೆಚ್ಚಿನ ಸಾಕ್ಷ್ಯ ಕಲೆ ಹಾಕುತ್ತಿದ್ದಾರೆ.

ನಿಖಿಲ್ ಲ್ಯಾಪ್ ಟಾಪ್ ನಲ್ಲಿ ಈ ಬಗ್ಗೆ ಎಲ್ಲ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗ್ತಿದೆ. ಕೋರ್ಟ್ ನಲ್ಲಿ ಇದೊಂದು ಮಹತ್ವದ ಸಾಕ್ಷಿಯಾಗಲಿದೆ. ಕೊಲೆ ನಂತ್ರ ಸಾಕ್ಷ್ಯ ನಾಶಪಡಿಸಲು ನಿಖಿಲ್, ಶೈಲಜಾ ಶವದ ಮೇಲೆ ಕಾರು ಹರಿಸಿದ್ದನಂತೆ. ಕೊಲೆ ನಡೆದ ಸ್ಥಳಕ್ಕೆ ನಿಖಿಲ್ ನನ್ನು ಕರೆದೊಯ್ದಿದ್ದ ಪೊಲೀಸರು ಚಾಕುವನ್ನು ವಶಕ್ಕೆ ಪಡೆದಿದ್ದಾರೆ.

ಈ ಮಧ್ಯೆ ಶೈಲಜಾ ನಿಖಿಲ್ ಪ್ರೀತಿ ಮಾಡ್ತಿರಲಿಲ್ಲ. ಆಕೆ ಸ್ನೇಹಜೀವಿಯಾಗಿದ್ದಳು. ಅದನ್ನು ನಿಖಿಲ್ ತಪ್ಪು ತಿಳಿದಿದ್ದ ಎಂದು ಶೈಲಜಾ ಸಹೋದರ ಹೇಳಿಕೆ ನೀಡಿದ್ದಾನೆ. ಶೈಲಜಾಗೆ 6 ವರ್ಷದ ಮಗನಿದ್ದು, ತಂದೆ ಜೊತೆ ಅಮೃತಸರದಲ್ಲಿದ್ದಾನೆ. ತಾಯಿ ಇನ್ನು ಬರೋದಿಲ್ಲ ಎಂಬ ವಿಷ್ಯ ಕೇಳಿ ಒಮ್ಮೆ ಕಣ್ಣೀರಿಟ್ಟ ಮಗ ನಂತ್ರ ಎಲ್ಲರಿಗೂ ಧೈರ್ಯ ಹೇಳುತ್ತಿದ್ದಾನಂತೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...