alex Certify
ಕನ್ನಡ ದುನಿಯಾ       Mobile App
       

Kannada Duniya

ವಿಷ ಕಾರುವ ಸರ್ಪಕ್ಕೊಂದು ವಿಶ್ರಾಂತಿ ಧಾಮ !

Shetpal-Snake

ಕಲ್ಲನಾಗರ ಕಂಡರೆ ಹಾಲನೆರೆ ಎಂಬೋರು, ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ ಸರ್ವಜ್ಞ ಎಂಬ ಮಾತಿದೆ. ಈ ಮಾತನ್ನು ಶೆತ್ಪಲ್ ಹಳ್ಳಿಯ ಜನರು ಅಕ್ಷರಶಃ ಸುಳ್ಳಾಗಿಸಿದ್ದಾರೆ. ಏಕೆಂದರೆ ಇವರು ಹಾವನ್ನು ಕಂಡರೆ ಹೆದರುವುದಾಗಲೀ, ಸಾಯಿಸುವುದಾಗಲೀ ಮಾಡುವುದಿಲ್ಲ. ಬದಲಾಗಿ ತಮ್ಮ ತಮ್ಮ ಮನೆಗಳಲ್ಲಿ ಹಾವು ವಾಸಿಸಲೆಂದೇ ವಿಶೇಷ ಕೋಣೆಯ ವ್ಯವಸ್ಥೆ ಮಾಡುತ್ತಾರೆ.

ಶೆತ್ಪಲ್ ಹಳ್ಳಿ ಇರುವುದು ಮಹಾರಾಷ್ಟ್ರದ ಶೋಲಾಪುರ ಜಿಲ್ಲೆಯಲ್ಲಿ. ಈ ಹಳ್ಳಿಯ ಮನೆ ಮನೆಗಳಲ್ಲಿ ಸರ್ಪಕ್ಕೆಂದೇ ಮೀಸಲಾದ ಜಾಗವಿದೆ. ಇವರು ಆಶ್ರಯ ಕೊಡುವುದು ಅತ್ಯಂತ ವಿಷಕಾರಿಯಾದ ಖೋಬ್ರಾ ಹಾವಿಗೆ.

ಶೆತ್ಪಲ್ ಹಳ್ಳಿಯ ಎಲ್ಲ ಮನೆಗಳಿಗೆ ಖೋಬ್ರಾ ಮನೆಯ ಸದಸ್ಯನಿದ್ದಂತೆಯೇ. ಎಲ್ಲರಂತೆ ಹಾವು ಕೂಡ ಮನೆಯಲ್ಲಿ ಸಲೀಸಾಗಿ ಓಡಾಡುತ್ತದೆ. ಹಾವು ವಾಸಿಸುವ ಜಾಗಕ್ಕೆ ಇವರು ದೇವಸ್ಥಾನ ಎಂದು ಕರೆಯುತ್ತಾರೆ. ಮನೆಯಲ್ಲೇ ವಾಸಿಸಿದರೂ ಈ ಹಾವು ಇಂದಿಗೂ ಯಾರಿಗೂ ತೊಂದರೆ ಕೊಟ್ಟಿಲ್ಲ. ಈ ಹಳ್ಳಿಯಲ್ಲಿ ಯಾರೊಬ್ಬರೂ ಹಾವು ಕಚ್ಚಿ ಸತ್ತಿಲ್ಲ. ಒಟ್ಟಿನಲ್ಲಿ ಈ ಹಳ್ಳಿಯಲ್ಲಿ ಮನುಷ್ಯನಿಗೆ ಹೆದರದ ಹಾವುಗಳು ಹಾಗೂ ಹಾವಿಗೆ ಹೆದರದ ಮನುಷ್ಯರು ರಾಜಾರೋಷವಾಗಿ ತಿರುಗುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...