alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ‘ಮುದುಕನ ಮದುವೆ’ ರಹಸ್ಯ

omair-759

ಹೈದ್ರಾಬಾದ್ ನ 16 ವರ್ಷದ ಬಾಲಕಿ 65 ವರ್ಷದ ಮುದುಕನನ್ನು ಮದುವೆಯಾಗಿರೋದು ಅಚ್ಚರಿಗೆ ಕಾರಣವಾಗಿತ್ತು. ಈ ಮದುವೆ ರಹಸ್ಯ ಈಗ ಬಯಲಾಗಿದೆ. ಶ್ರೀಮಂತಿಕೆಯ ವೈಭವ ಪ್ರದರ್ಶನ ಮಾಡಿ ಬಾಲಕಿ ಮನಸ್ಸಿನಲ್ಲಿ ಆಸೆ ಹುಟ್ಟಿಸಿ ಓಮಾನಿ ಶೇಕ್ ಅಹ್ಮದ್ ಅವಳನ್ನು ವರಿಸಿದ್ದಾನೆ.

ಬುರ್ಜ್ ಖಲೀಫಾದಲ್ಲಿರೋ ಹೋಟೆಲ್, ಮಸ್ಕಟ್ ಮತ್ತು ದುಬೈನಲ್ಲಿರೋ ಶಾಪಿಂಗ್ ಮಾಲ್ ಗಳು, ಐಷಾರಾಮಿ ವಿಲ್ಲಾಗಳ ವಿಡಿಯೋವನ್ನೆಲ್ಲ ಶೇಕ್, ಆ ಬಾಲಕಿಗೆ ತೋರಿಸಿದ್ದ. ಎಲ್ಲದಕ್ಕೂ ತಾನೇ ಮಾಲೀಕ, ನೀನು ಕೂಡ ರಾಣಿಯಂತೆ ಇರಬಹುದು ಅಂತಾ ಹೇಳಿದ್ದ.

ಬಾಲಕಿಯ ಆಂಟಿ ಮತ್ತಾಕೆಯ ಪತಿ ಕೂಡ 5 ಲಕ್ಷ ರೂಪಾಯಿಗೆ ನಿನ್ನನ್ನು ಮುದುಕನಿಗೆ ಮಾರಾಟ ಮಾಡ್ತಿದ್ದೇವೆ ಅನ್ನೋದನ್ನು ಬಾಯ್ಬಿಟ್ಟಿರಲಿಲ್ಲ. ಐಷಾರಾಮಿ ಬದುಕಿಗೆ ಆಸೆಪಟ್ಟ ಬಾಲಕಿ ಮದುವೆಗೆ ಸಮ್ಮತಿಸಿದ್ಲು. ಆದ್ರೆ ಈಗ ತನ್ನನ್ನು ಭಾರತಕ್ಕೆ ಕರೆದೊಯ್ಯುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.

ಬಾಲಕಿ ಎಲ್ಲಿದ್ದಾಳೆ ಅನ್ನೋದನ್ನು ಪತ್ತೆ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಓಮಾನಿ ಶೇಕ್, ಬಾಲಕಿಯ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾನೆ, ಆಕೆಯನ್ನು ಹಿಂಸಿಸುತ್ತಿದ್ದಾನೆ ಅಂತಾ ಹೇಳಲಾಗ್ತಿದೆ. ಬಾಲಕಿಯ ಆಂಟಿ ಮಸ್ಕಟ್ ಗೆ ಓಡಿ ಹೋಗಿದ್ದಾಳೆ, ಅಂಕಲ್ ತಲೆಮರೆಸಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...