alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ಗೆ ಅಧ್ಯಕ್ಷ ಸ್ಥಾನ: ಕೈ ಮನೆಯಲ್ಲೇ ಕೇಳಿ ಬಂತು ಅಪಸ್ವರ

ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ನೀಡುವ ವಿಚಾರದ ಬಗ್ಗೆ ಕಾಂಗ್ರೆಸ್ ಮನೆಯಲ್ಲಿಯೇ ವಿರೋಧದ ಕೂಗು ಕೇಳಿ ಬಂದಿದೆ. ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿ ಶಹಝಾದ್ ಪೂನವಾಲಾ, ರಾಹುಲ್ ಗಾಂಧಿಗೆ ಪಟ್ಟಾಭಿಷೇಕ ಮಾಡುವ ವಿಚಾರದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪಕ್ಷದಲ್ಲಿ ಸ್ಥಾನ ನೀಡಬೇಕೆಂದು ಶಹಝಾದ್ ಹೇಳಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಪ್ರಕ್ರಿಯೆಯನ್ನೇ ಶಹಝಾದ್ ಪ್ರಶ್ನೆ ಮಾಡಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿದ ಶಹಝಾದ್, ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಟಿಕೆಟ್ ಸಿಗಬೇಕು. ಅದು ಪೂನವಾಲಾ ಆಗಿರಲಿ ಇಲ್ಲ ರಾಹುಲ್ ಗಾಂಧಿಯಾಗಿರಲಿ ಎಂದಿದ್ದಾರೆ.

ಕಾಂಗ್ರೆಸ್ ನಲ್ಲಿ ನಡೆಯುವ ಅಧ್ಯಕ್ಷ ಚುನಾವಣೆ ಚುನಾವಣೆಯಲ್ಲ. ಬೂಟಾಟಿಕೆ. ಅಧ್ಯಕ್ಷ ಪಟ್ಟದ ಚುನಾವಣೆಯಲ್ಲಿ ಮತದಾನ ಮಾಡುವ ಪ್ರತಿನಿಧಿಗಳ ಜೊತೆ ಮೊದಲೇ ಮಾತುಕತೆ ನಡೆದಿರುತ್ತದೆ ಎಂದು ಶಹಝಾದ್ ಹೇಳಿದ್ದಾರೆ. ನಾನು ಹೇಳಿಕೆ ನೀಡ್ತಿದ್ದಂತೆ ನನ್ನ ಮೇಲೆ ಅನೇಕರು ವಿರೋಧ ವ್ಯಕ್ತಪಡಿಸಲಿದ್ದಾರೆ. ಆದ್ರೆ ನಾನು ಹೇಳಿದ ಮಾತು ಕಟು ಸತ್ಯವೆಂದು ಶಹಝಾದ್ ಹೇಳಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...