alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್ ಮಾಡಿದ್ದಾರೆ ಈ ತಂದೆ

ಅವರು ಕಳೆದ ಮೂರು ದಶಕಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮಗಳು ನಾಲ್ಕು ವರ್ಷಗಳ ಹಿಂದೆ ಪೊಲೀಸ್ ಪಡೆಗೆ ಸೇರ್ಪಡೆಯಾದವರು. ಮೊನ್ನೆ ಭಾನುವಾರ ಅವರು ಮುಖಾಮುಖಿಯಾದಾಗ ಅಪ್ಪ ಮಗಳಿಗೆ ಸೆಲ್ಯೂಟ್ ಮಾಡ್ತಾರೆ. ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಎ.ಆರ್. ಉಮಾಮಹೇಶ್ವರ ಶರ್ಮಾ ಅವರಿಗೆ ತಮ್ಮ ಮಗಳು, ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿರುವ ಸಿಂಧೂ ಶರ್ಮಾ ಬಗ್ಗೆ ಹೆಮ್ಮೆಯ ಭಾವ.

ಮುಂದಿನ ವರ್ಷ ನಿವೃತ್ತಿಯಾಗಲಿರುವ ಶರ್ಮಾ ಪ್ರಸ್ತುತ ಹೈದರಾಬಾದ್‌ನ ರಾಚಕೊಂಡ ಪೊಲೀಸ್ ಕಮಿಷನರೇಟ್‌ನ ಅಡಿಯಲ್ಲಿ ಮಲ್ಕಾಜ್‌ಗಿರಿ ಪ್ರದೇಶದ ಡಿಸಿಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಗಳು ಸಿಂಧೂ ಶರ್ಮಾ 2014ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಭಾನುವಾರ ಹೈದರಾಬಾದ್‌ನ ಹೊರವಲಯದಲ್ಲಿ ಟಿಆರ್‌ಎಸ್‌ನ ಸಾರ್ವಜನಿಕ ಸಭೆಯಲ್ಲಿ ಕರ್ತವ್ಯದಲ್ಲಿದ್ದಾಗ ಇವರಿಬ್ಬರು ಮುಖಾಮುಖಿಯಾದರು.

“ನಮ್ಮ ಕರ್ತವ್ಯದಲ್ಲಿದ್ದಾಗ ನಾವಿಬ್ಬರು ಮುಖಾಮುಖಿಯಾಗಿದ್ದು, ಇದೇ ಮೊದಲ ಬಾರಿ. ಆಕೆಯೊಂದಿಗೆ ಕೆಲಸ ಮಾಡುವುದು ನನ್ನ ಅದೃಷ್ಟ. ನಾವು ನಮ್ಮ ನಮ್ಮ ಕೆಲಸ ಮಾಡುತ್ತೇವೆ. ಮನೆಯಲ್ಲಿ ಅಪ್ಪ-ಮಗಳಂತೆಯೇ” ಎಂದು ಉಮಾಮಹೇಶ್ವರ ಶರ್ಮಾ ಹೇಳಿದರು. ಅವರು ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಆರಂಭಿಸಿ, ಇತ್ತೀಚೆಗಷ್ಟೇ ಐಪಿಎಸ್ ರಾಂಕ್‌ಗೆ ಬಡ್ತಿ ಹೊಂದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...