alex Certify
ಕನ್ನಡ ದುನಿಯಾ       Mobile App
       

Kannada Duniya

ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ಮೋದಿಯವರಿಗೆ ಬಿಗ್ ‘ಶಾಕ್’

ಬಿಜೆಪಿಯ ಹಿರಿಯ ಮುಖಂಡ ಯಶವಂತ ಸಿನ್ಹಾ ಹಾಗೂ ಸಂಸದ ಶತ್ರಘ್ನ ಸಿನ್ಹಾ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗೆ ಪಕ್ಷದ ಕೇಂದ್ರ ಕಚೇರಿಯಲ್ಲಿ ವೇದಿಕೆ ಹಂಚಿಕೊಳ್ಳುವುದರೊಂದಿಗೆ, ಕೇಂದ್ರ ಸರಕಾರದ ಕೆಲ ನಿರ್ಣಯಗಳನ್ನು ಖಂಡಿಸಿರುವುದು ಇದೀಗ ಅನೇಕ ರಾಜಕೀಯ ಕುತೂಹಲಕ್ಕೆ ನಾಂದಿ ಹಾಡಿದೆ.

ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನ ಹಿನ್ನಲೆಯಲ್ಲಿ ಲಕ್ನೋದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂವರು ನಾಯಕರು ಒಟ್ಟಿಗೆ ಭಾಗವಹಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಇದರೊಂದಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಶತೃಘ್ನ ಸಿನ್ಹಾ, ನಾನೆಂದು ಬಿಜೆಪಿಯ ವಿರುದ್ಧ ಮಾತನಾಡುವುದಿಲ್ಲ. ಆದರೆ ಕೇಂದ್ರ ಸರಕಾರ ತಗೆದುಕೊಂಡಿರುವ ಕೆಲ ನಿರ್ಧಾರಗಳಿಂದ ಬಡ ಜನರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ನೇರವಾಗಿ ಹೇಳುತ್ತಿದ್ದೇನೆ. ಸತ್ಯ ಮಾತನಾಡುವವರನ್ನು ಬಂಡಾಯ ಎಂದರೆ ನಾನು ಬಂಡಾಯ ಎಂದುಕೊಳ್ಳಬಹುದು ಎಂದು ಬಿಜೆಪಿ ನಾಯಕರ ವಿರುದ್ಧ ಮತ್ತೊಮ್ಮೆ ತಿರುಗಿಬಿದ್ದಿದ್ದಾರೆ.

ಹಲವು ದಿನಗಳಿಂದ ರಫೇಲ್ ಯುದ್ಧ ವಿಮಾನ ವಿಚಾರದಲ್ಲಿ ಕೇಳಿ ಬರುತ್ತಿರುವ ಆರೋಪದ ಬಗ್ಗೆ ಕೇಂದ್ರ ಸರಕಾರವೇಕೆ ಮೌನವಾಗಿದೆ? ಈಗಾಗಲೇ ಯುದ್ಧ ವಿಮಾನ ತಯಾರಿಕೆಯಲ್ಲಿ ಅನುಭವವಿರುವ ಎಚ್ಎಎಲ್ ನ್ನು ಬಿಟ್ಟು, ಇನ್ನೊಂದು ಸಂಸ್ಥೆಗೆ ನೀಡುವ ಅನಿವಾರ್ಯತೆ ಏನಿತ್ತು? ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸುವ ಮೂಲಕ, ಮತ್ತೊಮ್ಮೆ ಬಂಡಾಯ ಎದ್ದಿದ್ದಾರೆ.

ಇನ್ನು ಯಶವಂತ ಸಿನ್ಹಾ ಅವರು, ಇಂದಿನ ದೇಶದ ಪರಿಸ್ಥಿತಿ ತುರ್ತು ಪರಿಸ್ಥಿತಿಗಿಂತ ಹದಗೆಟ್ಟಿದೆ. ಜನರು ಇದೀಗ ಎಚ್ಚೆತ್ತುಕೊಳ್ಳಬೇಕಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಾಘಟ್ ಬಂಧನದ ಅವಶ್ಯಕತೆಯಿದೆ. ಆದ್ದರಿಂದ ಯುವ ರಾಜಕಾರಣಿಗಳು ಒಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದು, ಇದರೊಂದಿಗೆ ಅಖಿಲೇಶ್ ಯಾದವ್ ಅವರನ್ನು ” ಭಾರತ ರಾಜಕಾರಣದ ಉದಯೋನ್ಮುಖ ಪ್ರತಿಭೆ” ಎಂದು ಹೊಗಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...