alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಗಿದೆ ಬಿಜೆಪಿ ಕುರಿತ ಶಶಿ ತರೂರ್ ಹೇಳಿಕೆ

ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಬಿಜೆಪಿ ಕುರಿತು ನೀಡಿರುವ ಹೇಳಿಕೆಯೊಂದು ಈಗ ವಿವಾದಕ್ಕೆ ಕಾರಣವಾಗಿದೆ. ತಮ್ಮ ಹೇಳಿಕೆಗೆ ಶಶಿ ತರೂರ್ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಆಗ್ರಹಿಸುತ್ತಿದ್ದು, ಶಶಿ ತರೂರ್ ಮಾತ್ರ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಮಾರ್ಪಡಿಸಿ ದೇಶವನ್ನು ಹಿಂದೂ ಪಾಕಿಸ್ತಾನವನ್ನಾಗಿ ಮಾಡಲಿದೆ ಎಂದು ಶಶಿ ತರೂರ್ ಆರೋಪಿಸಿದ್ದರು.

ಸಂವಿಧಾನವನ್ನು ಬದಲಿಸುವುದನ್ನೇ ತನ್ನ ಉದ್ದೇಶವನ್ನಾಗಿಸಿಕೊಳ್ಳುವ ಬಿಜೆಪಿ, ಹೊಸ ಸಂವಿಧಾನದಲ್ಲಿ ಸಂಪೂರ್ಣವಾಗಿ ಹಿಂದೂ ರಾಷ್ಟ್ರದ ತತ್ವಗಳನ್ನು ಹೊಂದಲಿದೆ. ಇದರಿಂದ ಹಿಂದೂ ಪಾಕಿಸ್ತಾನ ಸೃಷ್ಟಿಯಾಗಲಿದೆ ಎಂದು ಶಶಿ ತರೂರ್ ಹೇಳಿದ್ದರು.

ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಕಾಂಗ್ರೆಸ್ ನಾಯಕರು ಭಾರತದ ಹೆಸರಿಗೆ ಮಸಿ ಬಳಿಯಲು ಸದಾ ಯತ್ನಿಸುತ್ತಿರುತ್ತಾರೆ. ಈ ಹೇಳಿಕೆಗೆ ಶಶಿ ತರೂರ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...