alex Certify
ಕನ್ನಡ ದುನಿಯಾ       Mobile App
       

Kannada Duniya

ಶರದ್ ಗೆ ಟಾಂಗ್ ಕೊಟ್ಟ ನಿತೀಶ್ ಕುಮಾರ್

sarad-nitish-d

ನವದೆಹಲಿ: ಮಹಾಘಟ್ ಬಂಧನ್ ಮೈತ್ರಿ ಕಡಿದುಕೊಂಡು ಬಿ.ಜೆ.ಪಿ.ಯೊಂದಿಗೆ ಸರ್ಕಾರ ರಚಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜೆ.ಡಿ.ಯು. ನೇತಾರ ಶರದ್ ಯಾದವ್ ಅವರ ನಡುವೆ ಅಂತರ ಹೆಚ್ಚಾಗಿದೆ.

ನಿತೀಶ್ ನಡೆಯನ್ನು ವಿರೋಧಿಸಿರುವ ಶರದ್ ಯಾದವ್ ಪಕ್ಷವನ್ನು ಉಳಿಸುವ ಹೆಸರಲ್ಲಿ ಹಲವು ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬಿ.ಜೆ.ಪಿ.ಯೊಂದಿಗೆ ಕೈ ಜೋಡಿಸಿ ನಿತೀಶ್ ಕುಮಾರ್ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್, ತಮ್ಮ ದಾರಿಯನ್ನು ಶರದ್ ಯಾದವ್ ಆಯ್ದು ಕೊಳ್ಳಬಹುದಾಗಿದೆ. ಬಿ.ಜೆ.ಪಿ. ಮೈತ್ರಿಯನ್ನು ನಾವು ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.

ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಶರದ್ ಯಾದವ್ ಅವರು ಯಾವುದೇ ತೀರ್ಮಾನವನ್ನು ಕೈಗೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಪಕ್ಷದ ನಾಯಕರು ಕೈಗೊಂಡ ತೀರ್ಮಾನದಂತೆಯೇ ಬಿ.ಜೆ.ಪಿ.ಯೊಂದಿಗೆ ಸೇರಿ ಸರ್ಕಾರ ರಚಿಸಲಾಗಿದೆ. ಆದಾಗ್ಯೂ ಶರದ್ ಯಾದವ್ ನಿರ್ಧಾರವನ್ನು ಕೈಗೊಳ್ಳಬಹುದು. ಅವರ ದಾರಿಯನ್ನು ಕಂಡು ಕೊಳ್ಳಬಹುದು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...