alex Certify
ಕನ್ನಡ ದುನಿಯಾ       Mobile App
       

Kannada Duniya

‘ಕೈ’ ರ‍್ಯಾಲಿಗೆ ಟ್ರಾಫಿಕ್ ಜಾಮ್, ನವಜಾತ ಶಿಶು ಸಾವು

ಹರಿಯಾಣದ ಸೋನಿಪತ್ ದಲ್ಲಿ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವಾರ್ ನೇತೃತ್ವದಲ್ಲಿ ಸೈಕಲ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆದ ಟ್ರಾಫಿಕ್ ಜಾಮ್ ಪರಿಣಾಮ ನವಜಾತ ಶಿಶು ಸಾವನ್ನಪ್ಪಿದೆ.

ಅಶೋಕ್ ತನ್ವಾರ್ `ಹರಿಯಾಣ ಬಚಾವೋ ಪರಿವರ್ತನ್ ಲಾವೋ’ ಅಭಿಯಾನ ಆರಂಭಿಸಿದ್ದು ಸೈಕಲ್ ರ‍್ಯಾಲಿಗೆ ಕರೆ ನೀಡಿದ್ದರು. ಈ ರ‍್ಯಾಲಿ ಪರಿಣಾಮ 30 ನಿಮಿಷ ಅಂಬುಲೆನ್ಸ್ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಶಿಶುವಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕದ ಕಾರಣ ಸಾವನ್ನಪ್ಪಿದೆ.

ಶಿಶು ಎರಡು ದಿನಗಳ ಹಿಂದೆ ಜನಿಸಿತ್ತು. ನವಜಾತ ಶಿಶುವಿನ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಕುಟುಂಬಸ್ಥರು ತಾಯಿ ಹಾಗೂ ಮಗುವನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ, ಅಂಬುಲೆನ್ಸ್ ರ‍್ಯಾಲಿ ಮಧ್ಯ ಸಿಲುಕಿಕೊಂಡಿದ್ದರಿಂದ ಈ ಘಟನೆ ನಡೆದಿದೆ.

ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕೈ ನಾಯಕರು, ನಮ್ಮ ಕಾರ್ಯಕರ್ತರು ಅಂಬುಲೆನ್ಸ್ ಗೆ ಸ್ಥಳ ಮಾಡಿಕೊಡಲು ಶ್ರಮಿಸಿದ್ದಾರೆ. ಅಲ್ಲದೆ ಟ್ರಾಫಿಕ್ ಜಾಮ್ ಆಗಲು ಸೈಕಲ್ ರ‍್ಯಾಲಿ ಕಾರಣ ಅಲ್ಲ. ಬದಲಿಗೆ ವರ್ಷಗಳಿಂದ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾರ್ಯದಿಂದ ಟ್ರಾಫಿಕ್ ಜಾಮ್ ಆಗಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...