alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಡ ಕಂಡಲ್ಲಿ ‘ಸುಸು’ ಮಾಡಿದವರಿಗೆ ಪೊಲೀಸರು ಮಾಡಿದ್ದೇನು ಗೊತ್ತಾ?

urinals

ಹೈದರಾಬಾದ್: ನೇಚರ್ ಕಾಲ್ ಗೆ ಅರ್ಜೆಂಟ್ ಆದಾಗ ಕೆಲವರಿಗಂತೂ ತಡೆಯಲು ಸಾಧ್ಯವಾಗಲ್ಲ. ಎಲ್ಲಾದರೂ ಖಾಲಿ ಜಾಗ, ಕನ್ಸರ್ ವೆನ್ಸಿ, ಸ್ವಲ್ಪ ಮರೆಯಾಗುವ ಜಾಗವನ್ನು ಹುಡುಕಿಕೊಳ್ಳುತ್ತಾರೆ. ಅದರಲ್ಲಿಯೂ ಕೆಲವರಿಗಂತೂ ತುರ್ತಾಗಿ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ಬಂದರೆ ಕಾಯುವುದೇ ಇಲ್ಲ.

ಕಂಡ ಕಂಡಲ್ಲೆಲ್ಲಾ ಮೂತ್ರ ವಿಸರ್ಜನೆ ಮಾಡುವವರಿಗೆ ಹೈದರಾಬಾದ್ ಮಹಾಂಕಾಳಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಮಾಡಿದ್ದೇನು ಎಂಬುದನ್ನು ತಿಳಿಯಲು ಮುಂದೆ ಓದಿ. ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ರಾಮಸ್ವಾಮಿ, ಸಹಾಯಕ ಇನ್ಸ್ ಪೆಕ್ಟರ್ ಗಳಾದ ರಮಣಯ್ಯ ಹಾಗೂ ಕೋಟಯ್ಯ ಅವರು ಸ್ವಚ್ಛತೆಗೆ ಒತ್ತು ನೀಡಲು ಮುಂದಾಗಿದ್ದಾರೆ. ತಮ್ಮ ಲಿಮಿಟ್ಸ್ ನಲ್ಲಿ ಕಂಡ ಕಂಡಲ್ಲೆಲ್ಲಾ ಗಲೀಜು ಮಾಡುತ್ತಿದ್ದವರಿಗೆ ತಿಳಿ ಹೇಳಿ ರಸ್ತೆ, ಫುಟ್ ಪಾತ್ ಗಳನ್ನು ಸ್ವಚ್ಛವಾಗಿಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಗಲೀಜಾಗಿದ್ದ ಸ್ಥಳಗಳನ್ನೆಲ್ಲಾ ಸ್ವಚ್ಛಗೊಳಿಸಿ ಸೂಚನಾ ಫಲಕಗಳನ್ನು ಹಾಕಿದ್ದಾರೆ. ಆದರೂ, ಕೆಲವರು ಅದೇ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಸೆಕುಂದಾ, ಸಿಕಂದರಾಬಾದ್ ನ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಬಳಿ ಕಾಲುದಾರಿಯಲ್ಲಿ ಹೀಗೆ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು.

ಇದನ್ನು ತಡೆಯಲು ಉಪಾಯವೊಂದನ್ನು ಮಾಡಿದ ಈ ಪೊಲೀಸ್ ಅಧಿಕಾರಿಗಳು ಮಾಡಬಾರದ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದವರಿಗೆ ಹಾರ ಹಾಕಿದ್ದಾರೆ. ಇಲ್ಲಿಂದ ಸ್ವಲ್ಪವೇ ದೂರದಲ್ಲಿ ಒಂದಲ್ಲ, ಎರಡು ಶೌಚಾಲಯಗಳಿದ್ದು, ಅವುಗಳನ್ನು ಬಳಸಿಕೊಳ್ಳಿ ಎಂದು ತಿಳಿಹೇಳಿದ್ದಾರೆ. ಹಾರ ಹಾಕಿಸಿಕೊಂಡವರು ನಾಚಿಕೆಯಿಂದ ತಲೆ ತಗ್ಗಿಸಿದ್ದಾರೆ. ಪೊಲೀಸರ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...