alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆಗೆ ಸ್ಪರ್ಧಿಸುತ್ತಾನಂತೆ ವ್ಯಕ್ತಿಯ ಹತ್ಯೆಯೆಸಗಿ ವಿಡಿಯೋ ಮಾಡಿದ ವ್ಯಕ್ತಿ

ಮುಸ್ಲಿಂ ಕಾರ್ಮಿಕನೊಬ್ಬನನ್ನು ಜೀವಂತ ಸುಟ್ಟು ಅದನ್ನು ವಿಡಿಯೋ ಮಾಡಿ ಜೈಲು ಸೇರಿದ್ದ ಶಂಭುಲಾಲ್ ರೆಗಾರ್ ರಾಜಕೀಯಕ್ಕಿಳಿಯುವ ಸಾಧ್ಯತೆ ಇದೆ. ಉತ್ತರ ಪ್ರದೇಶದ ನವನಿರ್ಮಾಣ ಸೇನೆ ಆತನಿಗೆ ಆಗ್ರಾದಿಂದ ಲೋಕಸಭಾ ಟಿಕೆಟ್ ಆಫರ್ ಮಾಡಿದೆ.

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ರಾಜಸ್ಥಾನದ ರಾಜಸ್ಮಂಡ್‌ನಲ್ಲಿ ನಡೆದ ಸಜೀವ ದಹನ ಪ್ರಕರಣ ಸಂಬಂಧ ಶಂಭುಲಾಲ್ ಕಳೆದ ಡಿಸೆಂಬರ್‌ನಿಂದ ಜೈಲಿನಲ್ಲಿದ್ದಾನೆ.

ನವ ನಿರ್ಮಾಣ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಜಾನಿ 2019 ರ ಲೋಕಸಭಾ ಚುನಾವಣೆಗೆ ಐದು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಅದರಲ್ಲಿ ಶಂಭುಲಾಲ್ ಹೆಸರೂ ಸೇರಿದೆ. ಆಗ್ರಾ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ಜೋಧ್‌ಪುರ ಜೈಲಿನಲ್ಲಿ ಶಂಭುಲಾಲ್ ಜೀವಕ್ಕೆ ಅಪಾಯವಿದೆ. ನಾವು ರೆಗಾರ್‌ನನ್ನು ಕಾಪಾಡುತ್ತೇವೆ ಹಾಗೂ ರಾಜಕೀಯ ಆಶ್ರಯವನ್ನು ನೀಡುತ್ತೇವೆ. ರೆಗಾರ್ ಪ್ರಕಾರ, ಆತ ಹಿಂದುತ್ವದ ರಕ್ಷಣೆಗೋಸ್ಕರ ಆ ಕೃತ್ಯ ಮಾಡಿದ್ದ. ಆತ ಕೊಲೆಗಾರನೋ, ಅಲ್ಲವೋ ಎಂಬುದನ್ನು ಕೋರ್ಟ್ ನಿರ್ಧರಿಸಲಿದೆ ಎಂದು ಅಮಿತ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...