alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಹಿದ್ ಪತ್ನಿ ಮೀರಾ ಹೆರಿಗೆ ಮಾಡಿಸಿದ್ದ ವೈದ್ಯ ನಾಪತ್ತೆ

shahiddoc_1495526702_749x421

ಬಾಲಿವುಡ್ ನಟ ಶಾಹಿದ್ ಕಪೂರ್ ಟ್ವೀಟರ್ ಮೂಲಕ ಅಭಿಮಾನಿಗಳಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಅವರ ಪರಿಚಯಸ್ಥ ಹಾಗೂ ಹಿರಿಯ ಸ್ತ್ರೀರೋಗ ತಜ್ಞ ಎಂ.ಲಿಂಕನ್  ಕೊಯಿಲೊರನ್ನು ಪತ್ತೆ ಹಚ್ಚಲು ನೆರವಾಗುವಂತೆ ಶಾಹಿದ್ ಕಪೂರ್ ಮನವಿ ಮಾಡಿದ್ದಾರೆ.

ವೈದ್ಯರು ಮೇ 21ರಂದು ಬೆಳಿಗ್ಗೆ 9.50ರ ಸುಮಾರಿಗೆ ಚರ್ಚ್ ಗೆ ಹೋಗಿ ಬರುವುದಾಗಿ ಮನೆ ಬಿಟ್ಟಿದ್ದಾರೆ. ಆದ್ರೆ ಈವರೆಗೂ ಮನೆಗೆ ವಾಪಸ್ ಆಗಿಲ್ಲ. ಶಾಹಿದ್ ಕಪೂರ್ ಪತ್ನಿ ಮೀರಾ ಹೆರಿಗೆ ಮಾಡಿಸಿದ್ದು ಇದೇ ವೈದ್ಯರೇ. ಲಿಂಕನ್ ಗೆ ಆಪ್ತರಾಗಿರುವ ಶಾಹಿದ್, ವೈದ್ಯರ ಫೋಟೋ ಹಾಕಿದ್ದಾರೆ. ಈ ವ್ಯಕ್ತಿ ನಿಮಗೆ ಸಿಕ್ಕಲ್ಲಿ ಈ ನಂಬರ್ ಗೆ ಕರೆ ಮಾಡಿ ಎಂದು +91 9821094395 ನಂಬರ್ ನೀಡಿದ್ದಾರೆ.

ಲಿಂಕನ್ ಪತ್ನಿ ಕಿರಣ್ ಕೊಯೊಲೊ ಕೂಡ ಸ್ತ್ರೀರೋಗ ತಜ್ಞೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದು ಪತಿ ನಾಪತ್ತೆಯಾಗಿರುವುದು ಅವರ ಆತಂಕಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...