alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಚ್ ಮಾಡಿದ್ದು ದಕ್ಷಿಣ ಭಾರತದ ಮಸಾಲೆ, ಬಂದಿದ್ದು?

masala

ಭಾರತೀಯ ಪುರುಷರ ಮನೋಭಾವ ಗೂಗಲ್ ಇಮೇಜ್ ನ ಒಂದು ಸಿಂಪಲ್ ಸರ್ಚ್ ನಲ್ಲಿ ಬಹಿರಂಗವಾಗಿದೆ. ದಕ್ಷಿಣ ಭಾರತದಲ್ಲಿ ಅಡುಗೆಗೆ ಯಾವ ರೀತಿ ಮಸಾಲಾಗಳನ್ನು ಬಳಸ್ತಾರೆ ಅನ್ನೋದನ್ನು ಚೆಕ್ ಮಾಡಲು ಯಾರೋ ಇಮೇಜ್ ಸರ್ಚ್ ಮಾಡಿದ್ರು.

ಸೌತ್ ಇಂಡಿಯನ್ ಮಸಾಲಾ ಅಂತಾ ಟೈಪ್ ಮಾಡಿದ್ದೇ ತಡ ಅಲ್ಲಿ ಮಸಾಲಾಗಳ ಬದಲು ಮಹಿಳೆಯರ ಫೋಟೋಗಳು ಬಂದಿವೆ. ಆದ್ರೆ ನಾರ್ತ್ ಇಂಡಿಯನ್ ಮಸಾಲಾ ಸರ್ಚ್ ಮಾಡಿದಾಗ ನಿಜವಾದ ಮಸಾಲೆ ಪದಾರ್ಥಗಳ ಇಮೇಜ್ ಬಂದಿದೆ.

ಗೂಗಲ್ ಸರ್ಚ್ ನಲ್ಲಿ ಸಿಕ್ಕ ರಿಸಲ್ಟ್ ನೋಡಿ ಶಾಕ್ ಆದ ಬಳಕೆದಾರ ಅದನ್ನು ಫೇಸ್ಬುಕ್ ನಲ್ಲೂ ಪೋಸ್ಟ್ ಮಾಡಿದ್ದಾನೆ. ಆದ್ರೆ ಇದರಲ್ಲಿ ಗೂಗಲ್ ತಪ್ಪೇನೂ ಇಲ್ಲ. 15 ವರ್ಷಗಳ ಹಿಂದೆಯೇ ಗೂಗಲ್ ಇಮೇಜ್ ಸರ್ಚ್ ಅನ್ನು ಬಿಡುಗಡೆ ಮಾಡಲಾಗಿತ್ತು. ನೀವು ಇಮೇಜ್ ಗೆ ಯಾವ ಹೆಸರು ಕೊಟ್ಟಿರುತ್ತೀರೋ ಅದರಂತೆ ಸರ್ಚ್ ರಿಸಲ್ಟ್ ಕೂಡ ಸಿಗುತ್ತದೆ.

ಮಹಿಳೆಯರ ಫೋಟೋಗೆ ಮಸಾಲಾ ಅಂತಾ ಹಾಕಿದ್ದರಿಂದ ಸ್ಪೈಸ್ ಸರ್ಚ್ ಮಾಡಿದಾಗ್ಲೂ ಮಹಿಳೆಯರ ಫೋಟೋಗಳೇ ಬಂದಿವೆ. ಮಸಾಲಾ ಮೂವಿ, ಮಾಲ್, ಐಟಂ ಗರ್ಲ್ ಅಂತೆಲ್ಲಾ ಬಳಸುವುದರಿಂದ ಈ ರೀತಿ ಅಪಾರ್ಥ ಸೃಷ್ಟಿಯಾಗುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...