alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸದಾಕೆ ಜೊತೆಗಿದ್ದ ವಿಡಿಯೋವನ್ನು ಪೋರ್ನ್ ಸೈಟ್ ಗೆ ಹಾಕಿ ಟೆಕ್ಕಿ ಯಡವಟ್ಟು

ಕೆಲಸದಾಕೆ ಜೊತೆ ಸಂಬಂಧ ಬೆಳೆಸಿದ್ದ ವಿಡಿಯೋವನ್ನು ಅಶ್ಲೀಲ ಸೈಟ್ ಗೆ ಅಪ್ಲೋಡ್ ಮಾಡಿದ ಸಾಫ್ಟವೇರ್ ಉದ್ಯೋಗಿಯೊಬ್ಬ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ. 28 ವರ್ಷದ ಸಾಫ್ಟವೇರ್ ಉದ್ಯೋಗಿಯನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ನಾಗೇಶ್ವರ್ ರಾವ್ ಹೈದ್ರಾಬಾದ್ ನ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯ ನೌಕರ ಎನ್ನಲಾಗಿದೆ.

ಪೋರ್ನ್ ವೆಬ್ಸೈಟ್ ನ ಸದಸ್ಯನಾಗಲು ನಾಗೇಶ್ವರ್ ರಾವ್ ಈ ರೀತಿ ಮಾಡಿದ್ದಾನೆ. ವಾಸ್ತವವಾಗಿ ಪೋರ್ನ್ ಸೈಟ್ ಪಾಲುದಾರರಾಗುವವರು ಮೊದಲು ಒಂದು ವಿಡಿಯೋ ಅಪ್ಲೋಡ್ ಮಾಡಬೇಕಾಗುತ್ತದೆ. ಅದಕ್ಕೆ ವೆಬ್ಸೈಟ್ ಮಾಲೀಕರು ಹಣ ಸಂದಾಯ ಮಾಡುತ್ತಾರೆ. ನಂತ್ರ ವಿಡಿಯೋ ಅಪ್ಲೋಡ್ ಮಾಡ್ತಿದ್ದರೆ ಪಾಯಿಂಟ್ ಸಿಗುತ್ತದೆ.

ಮನೆ ಕೆಲಸದಾಕೆ ಜೊತೆಗಿದ್ದ ಕ್ಷಣವನ್ನು ವಿಡಿಯೋ ಮಾಡಿದ ನಾಗೇಶ್ವರ್ ರಾವ್ ಅದನ್ನು ಪೋರ್ನ್ ವೆಬ್ಸೈಟ್ ಗೆ ಹಾಕಿದ್ದಾನೆ. ಈ ವಿಡಿಯೋವನ್ನು ಪೀಡಿತೆ ಮಗಳ ಸ್ನೇಹಿತ ನೋಡಿದ್ದಾನೆ. ಆತನ ಹೇಳಿಕೆ ನಂತ್ರ ಪೀಡಿತೆ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಮೇಲೆ ಪೊಲೀಸರು ನಾಗೇಶ್ವರ್ ರಾವ್ ನನ್ನು ಬಂಧಿಸಿದ್ದಾರೆ. ನಾಗೇಶ್ವರ್ ರಾವ್ ಇದೇ ಮೊದಲ ಬಾರಿ ವಿಡಿಯೋ ಹಾಕಿದ್ದ ಎನ್ನಲಾಗಿದೆ. ಪೋರ್ನ್ ಸೈಟ್ ಪಾಲುದಾರಿಕೆ ಪಡೆಯುವುದು ಆತನ ಉದ್ದೇಶವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...