alex Certify
ಕನ್ನಡ ದುನಿಯಾ       Mobile App
       

Kannada Duniya

ಹೈ ಪ್ರೊಪೈಲ್ ಸೆಕ್ಸ್ ರಾಕೆಟ್ ಬಯಲಿಗೆಳೆದ ಪೊಲೀಸರು

Sex-racket-bust2913

ವೇಶ್ಯಾವಾಟಿಕೆ ದಂಧೆಯನ್ನು ನಿಯಂತ್ರಿಸಿದಷ್ಟು ವ್ಯಾಪಕವಾಗಿ ಬೆಳೆಯುತ್ತಿದೆ. ಅದರಲ್ಲಿಯೂ ಮುಂಬೈನಂತಹ ಮಹಾನಗರದಲ್ಲಿ ವೇಶ್ಯಾವಾಟಿಕೆಯಂತಹ ಕರಾಳದಂಧೆಗೆ ಸಂಪೂರ್ಣ ಕಡಿವಾಣ ಹಾಕುವುದು ಕಷ್ಟಸಾಧ್ಯ. ಹೀಗೆ ಗುಪ್ತವಾಗಿ ನಡೆಯುತ್ತಿದ್ದ ಹೈಪ್ರೊಫೈಲ್ ಸೆಕ್ಸ್ ರಾಕೆಟ್ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಂಬೈನ ಸಬರ್ ಬನ್ ಚೆಂಬೂರ್ ಸ್ಪಾ ಮೇಲೆ ರೇಡ್ ಮಾಡಿದ ಪೊಲೀಸರು ಮೂವರನ್ನು ಬಂಧಿಸಿದ್ದು, 6 ಮಂದಿ ವಿದೇಶಿ ಯುವತಿಯರು ಸೇರಿದಂತೆ 7 ಮಂದಿಯನ್ನು ರಕ್ಷಿಸಿದ್ದಾರೆ. ಸ್ಪಾ ಮಾಲೀಕ, ವ್ಯವಸ್ಥಾಪಕ ಹಾಗೂ ಪಿಂಪ್ ನನ್ನು ಬಂಧಿಸಲಾಗಿದೆ. ಥೈಲ್ಯಾಂಡ್ ಮೊದಲಾದ ಕಡೆಗಳಿಂದ ಹೆಚ್ಚಿನ ವೇತನದ ಉದ್ಯೋಗ ಕೊಡಿಸುವುದಾಗಿ ಕರೆದುಕೊಂಡು ಬಂದು ಬಲವಂತವಾಗಿ ವೇಶ್ಯಾವಾಟಿಕೆ ಜಾಲಕ್ಕೆ ನೂಕುತ್ತಿದ್ದರು ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರು ಈ ಪ್ರದೇಶದಲ್ಲಿ ಹೈ ಪ್ರೊಫೈಲ್ ವೇಶ್ಯಾವಾಟಿಕೆ ನಡೆಯುವ ಮಾಹಿತಿ ಕಲೆಹಾಕಿದ್ದು, ಪೂರ್ಣ ಸಿದ್ಧತೆ ನಂತರ ಕಾರ್ಯಾಚರಣೆ ನಡೆಸಿದ್ದರು. ದಾಳಿಯ ಸಂದರ್ಭದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಓರ್ವ ಸ್ಥಳೀಯ ಯುವತಿ ಹಾಗೂ 6 ಮಂದಿ ವಿದೇಶಿ ಯುವತಿಯರನ್ನು ರಕ್ಷಿಸಿ ಮಹಿಳಾ ಕಲ್ಯಾಣ ಕೇಂದ್ರಕ್ಕೆ ಒಪ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...