alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ವಸ್ತ್ರ ಸ್ಥಿತಿಯಲ್ಲಿ ಸಿಕ್ಕಿಬಿದ್ದ 12 ಜೋಡಿ

ಛತ್ತೀಸ್ಗಢದ ರಾಜಧಾನಿ ರಾಯ್ಪುರದ ಬೋರಿಯಾಕಲಾದಲ್ಲಿ ಸೆಕ್ಸ್ ರಾಕೆಟ್ ಬಣ್ಣ ಬಯಲಾಗಿದೆ. ಅರ್ಧ ಡಜನ್ ಗಿಂತಲೂ ಹೆಚ್ಚು ಹುಡುಗಿಯರನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಗ್ರಾಹಕರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾತ್ರಿ ಪ್ರಸಿದ್ಧ ಪ್ರದೇಶದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ನಡೆಸಿದ ಪೊಲೀಸರು ಹುಡುಗ-ಹುಡುಗಿಯನ್ನು ನಿರ್ವಸ್ತ್ರ ಸ್ಥಿತಿಯಲ್ಲಿ ಬಂಧಿಸಿದ್ದಾರೆ.

ಬಂಧಿತ ಹುಡುಗಿಯರು ದೆಹಲಿ ಹಾಗೂ ಹರ್ಯಾಣದವರು. ಒಂದು ತಿಂಗಳ ಒಪ್ಪಂದದ ಮೇಲೆ ರಾಯ್ಪುರಕ್ಕೆ ಬಂದಿದ್ದರು ಎನ್ನಲಾಗಿದೆ. 28 ದಿನಗಳನ್ನು ಯಶಸ್ವಿಯಾಗಿ ಕಳೆದಿದ್ದ ಹುಡುಗಿಯರಿಗೆ ಕೊನೆ ದಿನ ಕೈ ಕೊಟ್ಟಿದೆ. ಗ್ರಾಹಕರ ಜೊತೆಗಿದ್ದ ವೇಳೆ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮುಂಬೈ, ದೆಹಲಿ ಹಾಗೂ ಹರ್ಯಾಣದಿಂದ ಹುಡುಗಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಲ್ಲಾಳಿ ತಪ್ಪಿಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ದಲ್ಲಾಳಿ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...