alex Certify
ಕನ್ನಡ ದುನಿಯಾ       Mobile App
       

Kannada Duniya

ಸಂದೀಪ್ ಕುಮಾರ್ ಸೆಕ್ಸ್ ಸಿ.ಡಿ. ರಹಸ್ಯ ಬಯಲು..!

sandeep kumar 1

ನವದೆಹಲಿ: ಸೆಕ್ಸ್ ಸಿ.ಡಿ. ಹಗರಣದಲ್ಲಿ ಸಿಕ್ಕಿಬಿದ್ದಿರುವ ಆಪ್ ಮಾಜಿ ಸಚಿವ ಸಂದೀಪ್ ಕುಮಾರ್ ನ ಒಂದೊಂದೇ ಕಲ್ಯಾಣ ಗುಣಗಳನ್ನು ಪೊಲೀಸರು ಬಯಲಿಗೆಳೆಯುತ್ತಿದ್ದಾರೆ.

ಇಂತಹ ಅಶ್ಲೀಲ ದೃಶ್ಯಗಳನ್ನು ಸಂದೀಪ್ ಕುಮಾರ್ ತನ್ನ ಮನೆಯಲ್ಲೇ ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ. ಈ ಕೃತ್ಯಕ್ಕೆ ಬಳಸುತ್ತಿದ್ದ 3 ವಿದ್ಯುತ್ ಸಾಧನಗಳನ್ನು ಸಂದೀಪ್ ಕುಮಾರ್ ಮನೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಒಂದು ಮೊಬೈಲ್ ಸೇರಿದಂತೆ 3 ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಫೊರೆನ್ಸಿಕ್ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಸಾಧನಗಳನ್ನು ಬಳಸಿ ದೆಹಲಿಯ ಸುಲ್ತಾನ್ ಪುರಿಯಲ್ಲಿರುವ ತನ್ನ ನಿವಾಸದಲ್ಲೇ ಸಂದೀಪ್ ಕುಮಾರ್ ಮಹಿಳೆಯರನ್ನು ಅಸಭ್ಯವಾಗಿ ಸೆರೆಹಿಡಿಯುತ್ತಿದ್ದ ಎಂಬುದು ಗೊತ್ತಾಗಿದೆ.

ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ, ಆದ್ರೆ ಸಂದೀಪ್ ಕುಮಾರ್ ತನಿಖೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಪಡಿತರ ಚೀಟಿ ಕೊಡಿಸುವಂತೆ ಮನವಿ ಕೊಡಲು ಬಂದ ಮಹಿಳೆಗೆ ಮತ್ತು ಬರಿಸುವ ಪಾನೀಯ ನೀಡಿ, ಸಂದೀಪ್ ಕುಮಾರ್ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆಂಬ ಆರೋಪವಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಸಂದೀಪ್ ಕುಮಾರ್ ಇಬ್ಬರು ಮಹಿಳೆಯರೊಂದಿಗೆ ರಾಸಲೀಲೆ ನಡೆಸುತ್ತಿರುವ ವಿಡಿಯೋ ಕೂಡ ಬಹಿರಂಗವಾಗಿತ್ತು. ಅಲ್ಲದೇ, ಆತನ ವಿರುದ್ಧ ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...