alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಬಂಧ ಬೆಳಸಿದ ಹುಡುಗಿ ವಯಸ್ಸು ಗೊತ್ತಿರಲಿಲ್ಲ ಎಂದವನಿಗೆ ಸಿಗ್ತು ಬೇಲ್

ಸುಲ್ತಾನಪುರಿ ಪ್ರದೇಶದಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ಕೋರ್ಟ್ ವ್ಯಕ್ತಿಯೊಬ್ಬನಿಗೆ ಜಾಮೀನು ನೀಡಿದೆ. ಕೋರ್ಟ್ ಮುಂದೆ ಹಾಜರಾದ ವ್ಯಕ್ತಿ, ಸಂಬಂಧ ಬೆಳೆಸಿದ ಹುಡುಗಿ ವಯಸ್ಸು ಗೊತ್ತಿರಲಿಲ್ಲ. ನನಗೆ ಗೊತ್ತಾಗದೆ ತಪ್ಪಾಗಿದೆ ಎಂದಿದ್ದಾನೆ.

ಸುಲ್ತಾನಪುರಿ ಪ್ರದೇಶದಲ್ಲಿ ತಾಯಿ ಜೊತೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ 16 ವರ್ಷದ ಬಾಲಕಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು. ಅಂಗಡಿ ಪಕ್ಕದ ಮನೆಯಲ್ಲಿದ್ದ ಮಹಿಳೆಯೊಬ್ಬಳು ಬಾಲಕಿಯನ್ನು ನಂಬಿಸಿ ಇನ್ನೊಬ್ಬರಿಗೆ ಮಾರಿದ್ದಳು. ನಾಲ್ಕು ದಿನಗಳ ಕಾಲ ಅನೇಕರು ಆಕೆ ಜೊತೆ ಸಂಬಂಧ ಬೆಳೆಸಿದ್ದರು. ಬಾಲಕಿ ಆರೋಗ್ಯ ಹದಗೆಡುತ್ತಿದ್ದಂತೆ ಆಕೆಯನ್ನು ರಸ್ತೆ ಬದಿ ಎಸೆದು ಹೋಗಲಾಗಿತ್ತು. ಘಟನೆ ನಂತ್ರ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಳು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ಹೇಳಿಕೆ ಮೇರೆಗೆ ಇನ್ನೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ಆತ ವೇಶ್ಯಾವಾಟಿಕೆ  ಅಡ್ಡೆಯ ಖಾಯಂ ಗ್ರಾಹಕನಾಗಿದ್ದ. ಆದ್ರೆ ಆತನಿಗೆ ಹುಡುಗಿ ವಯಸ್ಸು ತಿಳಿದಿರಲಿಲ್ಲ. ಸಾಮಾನ್ಯವಾಗಿ ವೇಶ್ಯೆಯರ ವಯಸ್ಸನ್ನು ಹೇಳಲಾಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡ ಕೋರ್ಟ್ ಗ್ರಾಹಕನಿಗೆ ಜಾಮೀನು ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...