alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಲ್ಲಿದ್ರೂ ತಂದೆಯಾಗಿದ್ದಾನೆ ಈ ಡಾನ್

jail-don-mum

ಮುಂಬೈ: ಭೂಗತ ಪಾತಕಿಯೊಬ್ಬ ಜೈಲಲ್ಲಿದ್ದುಕೊಂಡೇ ತಂದೆಯಾದ ಘಟನೆ ಬೆಳಕಿಗೆ ಬಂದಿದೆ. ಹೇಗೆ ಅಂತಿರಾ?  ಹಾಗಾದ್ರೆ ಈ ಸ್ಟೋರಿ ಓದಿ…

ಅನೇಕ ವರ್ಷಗಳಿಂದ ವಿಚಾರಣಾಧೀನ ಕೈದಿಯಾಗಿರುವ ಡಾನ್ ಒಂದೇ ಒಂದು ಸಲ ಪೆರೋಲ್ ಮೇಲೆ ಹೊರಗೆ ಬಂದಿಲ್ಲ.

ಈತನನ್ನು ವಿಚಾರಣೆಗೆ ರೈಲಿನಲ್ಲಿ ಕರೆದೊಯ್ಯುವಾಗ, ರೈಲಿನಲ್ಲೇ ಪೊಲೀಸರ ಕಾವಲಿನಲ್ಲಿ ತನ್ನ ಸಂಗಾತಿಯನ್ನು ಸೇರಿದ್ದಾನೆ.

ಆಕೆ ಕೂಡ ಆಗಾಗ ಜೈಲಿಗೆ ಬರುತ್ತಿದ್ದಳು. ಡಾನ್ ಆಕೆಯನ್ನು ಜೈಲಿನಲ್ಲಿ ಭೇಟಿಯಾಗುವ ಜೊತೆಗೆ ವಿಚಾರಣೆಗಾಗಿ ಹೊರಗೆ ಹೋಗುವ ಸಂದರ್ಭದಲ್ಲಿ ಆಕೆಯನ್ನು ಕರೆಸಿಕೊಳ್ಳುತ್ತಿದ್ದ.

ರೈಲಿನಲ್ಲಿಯೇ ಆಕೆಯನ್ನು ಸೇರುತ್ತಿದ್ದ. ಭದ್ರತಾ ಸಿಬ್ಬಂದಿ ಈ ಸಂದರ್ಭದಲ್ಲಿ ಬಟ್ಟೆಗಳಿಂದ ರೈಲಿನ ಕಿಟಕಿಗಳನ್ನು ಮುಚ್ಚುತ್ತಿದ್ದರೆನ್ನಲಾಗಿದೆ.

ಅಂದ ಹಾಗೇ ಡಾನ್ ಸಂಗಾತಿ 1 ವರ್ಷ 5 ತಿಂಗಳ ಹಿಂದೆಯೇ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆ ಗರ್ಭಿಣಿಯಾದ ಸಂದರ್ಭದಲ್ಲಿ ಡಾನ್ ಜೈಲಿನಲ್ಲಿಯೇ ಇದ್ದ. ಆದರೂ ಆತ ತಂದೆಯಾಗಿರುವ ವಿಷಯವೀಗ ವ್ಯಾಪಕ ಚರ್ಚೆಗೆ ಒಳಗಾಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...