alex Certify
ಕನ್ನಡ ದುನಿಯಾ       Mobile App
       

Kannada Duniya

ನಿರುದ್ಯೋಗಿ ಯುವಕರಿಗೆ ಸಿಹಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ

ರೈಲ್ವೇ ಇಲಾಖೆ ವಿದ್ಯಾವಂತ ಯುವಕರಿಗೆ ಸಿಹಿ ಸುದ್ದಿಯನ್ನು ಕೊಟ್ಟಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ರೈಲ್ವೆ ಇಲಾಖೆ ನಿರ್ಧರಿಸಿದೆ. ಆ ಪ್ರಕಾರ ಸಹಾಯಕ ಲೋಕೋ ಪೈಲೆಟ್ಸ್ ಸೇರಿದಂತೆ ತಂತ್ರಜ್ಞರು, ರೈಲು ಹಳಿಗಳ ಮೇಲ್ವಿಚಾರಣಾ ಸಿಬ್ಬಂದಿ ಸಹಾಯಕ ಪಾಯಿಂಟ್ಸ್ ಮೆನ್ ಸೇರಿದಂತೆ ಗ್ರೂಪ್ ಸಿ ಮತ್ತು ಲೆವೆಲ್ 1 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಒಟ್ಟು 64 ಸಾವಿರ ಉದ್ಯೋಗಾವಕಾಶಗಳನ್ನು ಭಾರತೀಯ ರೈಲ್ವೆ ಇಲಾಖೆ ಕಲ್ಪಿಸಿದೆ.

ರೈಲ್ವೇ ಉದ್ಯೋಗ ಸಮಿತಿಯಿಂದ ಈ ಹುದ್ದೆಗಳ ಭರ್ತಿ ಕಾರ್ಯ ನಡೆಯಲಿದೆ. ಈ ಹುದ್ದೆಗಳ ಭರ್ತಿಯ ಜೊತೆಗೆ 8619 ರೈಲ್ವೆ ಕಾನ್ಸ್ ಟೇಬಲ್ಗಳು ಮತ್ತು 1120 ಸಬ್ಇನ್ಸ್ಪೆಕ್ಟರ್ಸ್ ಗಳ ಹುದ್ದೆಗೂ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್ ಸಿ ಹುದ್ದೆಗಳಿಗಾಗಿ ಈಗಾಗ್ಲೇ 47 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಲೆವೆಲ್ 1 ಹುದ್ದೆಗಳಿಗಾಗಿ 1 ಕೋಟಿ 89 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಕಾನ್ಸ್ಟೇಬಲ್ ಮತ್ತು ಸಬ್ಇನ್ಸ್ಪೆಕ್ಟರ್ ಹುದ್ದೆಗಳಿಗೆ ಕ್ರಮವಾಗಿ 58 ಮತ್ತು 14 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಇವರಲ್ಲಿ ಅರ್ಹ ಅಭ್ಯರ್ಥಿಗಳನ್ನ ಆರಿಸಲು ರೈಲ್ವೆ ಇಲಾಖೆ ಪರೀಕ್ಷೆಯನ್ನು ನಡೆಸಲಿದೆ. ಪರೀಕ್ಷೆಯ ದಿನಾಂಕ ಮತ್ತು ಪರೀಕ್ಷೆಯ ಇತರೆ ವಿವರಗಳನ್ನ ರೈಲ್ವೆ ಇಲಾಖೆ ಇನ್ನು ಬಹಿರಂಗಪಡಿಸಿಲ್ಲ. ಆದ್ರೆ ಪರೀಕ್ಷೆಯಲ್ಲಿ ಈ ಬಾರಿ ರೈಲ್ವೆ ಇಲಾಖೆ ತುಂಬಾನೇ ಕಠಿಣ ನಿಯಮಗಳನ್ನ ಜಾರಿ ಮಾಡಲಿದೆ. ಕಂಪ್ಯೂಟರ್ ಮೂಲಕವೇ ಪರೀಕ್ಷೆಯನ್ನ ಅಭ್ಯರ್ಥಿಗಳು ಎದುರಿಸಬೇಕಿದೆ. ಪರೀಕ್ಷಾ ಅಕ್ರಮಗಳನ್ನು ತಪ್ಪಿಸುವ ಸಲುವಾಗಿ ಸಿಸಿ ಟಿವಿ ಕಣ್ಗಾವಲಿನಲ್ಲಿ ಪರೀಕ್ಷೆ ಆಯೋಜನೆ ಮಾಡೋಕೆ ಚಿಂತನೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...