alex Certify
ಕನ್ನಡ ದುನಿಯಾ       Mobile App
       

Kannada Duniya

ಕಟ್ಟಡದ ಅವಶೇಷಗಳಡಿ ಇನ್ನಷ್ಟು ಮೃತದೇಹ

ಗ್ರೇಟರ್ ನೋಯ್ಡಾದ ಶಾಹಬೇರಿಯಲ್ಲಿ ಕಟ್ಟಡ ಕುಸಿದು ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ. ಬುಧವಾರ ನಡೆದ ಘಟನೆಯಲ್ಲಿ ಈವರೆಗೆ 9 ಮಂದಿ ಸಾವನ್ನಪ್ಪಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಎರಡು ಕಟ್ಟಡಗಳು ಹಳೆ ಕಟ್ಟಡದ ಮೇಲೆ ವಾಲಿತ್ತು. ಹಳೆ ಕಟ್ಟಡದಲ್ಲಿ ವಾಸವಾಗಿದ್ದ ಜನರು ಅವಶೇಷಗಳಡಿ ಸಿಲುಕಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ 24 ಮಂದಿ ವಿರುದ್ಧ ದೂರು ದಾಖಲಾಗಿದೆ. ಈಗಾಗಲೇ 4 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಿಲ್ಡರ್ ಮೊದಲೇ ಜನರಿಂದ ಹಣ ಪಡೆದು ನಂತ್ರ ಕಟ್ಟಡ ನಿರ್ಮಾಣ ಶುರು ಮಾಡಿದ್ದ. ಕಳಪೆ ಕಾಮಗಾರಿ ಈ ಘಟನೆಗೆ ಕಾರಣವಾಗಿದೆ. ಉತ್ತರ ಪ್ರದೇಶ ಯೋಗಿ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಳೆ ಚುರುಕುಗೊಳಿಸಿದೆ. ನೋಯ್ಡಾದ ಯೋಜನಾ ವ್ಯವಸ್ಥಾಪಕ ಬಿ.ಪಿ. ಸಿಂಗ್ ಮತ್ತು ಸಹಾಯಕ ಯೋಜನಾ ವ್ಯವಸ್ಥಾಪಕ ಅಬ್ಬಾಸ್ ಝೈದಿ ಅವರನ್ನು ಅಮಾನತುಗೊಳಿಸಲಾಗಿದೆ.

ಬುಧವಾರದಿಂದ ರಕ್ಷಣಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅವಶೇಷಗಳಡಿ ಇನ್ನೂ ಅನೇಕರು ಸಿಲುಕಿರುವ ಶಂಕೆಯಿದೆ. ನಾಲ್ಕನೇ ಮಹಡಿಯಲ್ಲಿ ನಾಲ್ವರು ಸ್ನೇಹಿತರ ಜೊತೆ ವಾಸವಾಗಿದ್ದ ಪೇಂಟರ್ ಒಬ್ಬ ಘಟನೆ ನಡೆಯುವ ಕೆಲ ಸಮಯದ ಹಿಂದೆ ಕೆಲಸದ ಮೇಲೆ ಹೊರಗೆ ಹೋಗಿದ್ದ. ವಾಪಸ್ ಆಗುವ ವೇಳೆಗೆ ಘಟನೆ ನಡೆದಿತ್ತು. ತನ್ನ ಜೊತೆಗಿದ್ದವರ ಹುಡುಕಾಟ ನಡೆಸಿದ್ದ ಪೇಂಟರ್ ಗೆ ಮೂವರ ಹೆಣ ಸಿಕ್ಕಿದೆ. ಇನ್ನೊಬ್ಬನ ಹುಡುಕಾಟ ಮುಂದುವರೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...