alex Certify
ಕನ್ನಡ ದುನಿಯಾ       Mobile App
       

Kannada Duniya

ಅನಾಥ ಸತ್ತ ಮೇಲೆ ಬಂತು ಸಂಬಂಧಿಕರ ದಂಡು..!?

ಮುಂಬೈನ ಎಂಪಿ ಹಿಲ್ ಕಾಂಪೌಂಡ್ ನ ಬೃಂದಾವನ ಸೊಸೈಟಿಯಲ್ಲಿ ವಾಸವಾಗಿದ್ದ ನಿತೇಶ್ ಶಿಂಧೆ 10 ದಿನಗಳ ಹಿಂದೆ ಸಾವನ್ನಪ್ಪಿದ್ದಾನೆ. 18 ವರ್ಷದ ನಿತೇಶ್, 5 ವರ್ಷದಲ್ಲಿರುವಾಗಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ. ಪಾಲಕರು ಹೆಚ್ಐವಿಗೆ ಬಲಿಯಾಗಿದ್ದರು.

ನಿತೇಶ್ ಏಕೈಕ ಸಹೋದರಿಯನ್ನು ಕಳೆದುಕೊಂಡಿದ್ದ. ನಂತ್ರ ಅಜ್ಜಿ ಹಾಗೂ ಚಿಕ್ಕಮ್ಮನ ಜೊತೆ ಫ್ಲಾಟ್ ನಲ್ಲಿ ವಾಸವಾಗಿದ್ದ. ಆದ್ರೆ 8 ವರ್ಷಗಳ ಹಿಂದೆ ಅಜ್ಜಿ ಹಾಗೂ ನಾಲ್ಕು ವರ್ಷಗಳ ಹಿಂದೆ ಚಿಕ್ಕಮ್ಮ ಸಾವನ್ನಪ್ಪಿದ್ದು, ಅಲ್ಲಿಂದ ನಿತೇಶ್ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ. ಕ್ಲಿನಿಕ್ ಒಂದರಲ್ಲಿ ಸಹಾಯಕನಾಗಿ ಕೆಲಸ ಮಾಡ್ತಿದ್ದ.

ನಿತೀಶ್ 10 ದಿನಗಳ ಹಿಂದೆ ಮನೆ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡ ಸೊಸೈಟಿ ಮುಖ್ಯಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ಮನೆ ಬಾಗಿಲು ತೆರೆದಾಗ ನಿತೀಶ್ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆಸ್ಪತ್ರೆಗೆ ದಾಖಲಿಸುವ ಮೊದಲೇ ಕೊನೆಯುಸಿರೆಳೆದಿದ್ದ. ನಿತೀಶ್ ಸತ್ತ ಸುದ್ದಿ ತಿಳಿಯುತ್ತಿದ್ದಂತೆ ಇಷ್ಟು ದಿನ ಇರದ ಸಂಬಂಧಿಕರು ನಿತೀಶ್ ಶವದ ಮೇಲೆ ಹಕ್ಕು ಚಲಾಯಿಸಲು ಬರ್ತಿದ್ದಾರೆ. ಅದ್ರಲ್ಲಿ ಯಾರೂ ರಕ್ತ ಸಂಬಂಧಿಗಳಲ್ಲ ಎಂಬುದು ಪೊಲೀಸ್ ಅನುಮಾನ. ನಿತೀಶ್ ಬಳಿಯಿದ್ದ 250 ಚದರ ಅಡಿ ಮನೆ ಮೇಲೆ ಎಲ್ಲರ ಕಣ್ಣಿದೆ. ಶವವನ್ನು ಯಾರಿಗೂ ಹಸ್ತಾಂತರಿಸದೆ ಶವಾಗಾರದಲ್ಲಿ ಶವವನ್ನಿಟ್ಟಿದ್ದಾರೆ ಪೊಲೀಸರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...