alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ಶವದ ಮಗ್ಗುಲಲ್ಲೇ 3 ದಿನ ಕಳೆದ ಪುತ್ರ

ಚಂಡೀಗಢ: ಆಘಾತಕಾರಿ ಘಟನೆಯೊಂದರಲ್ಲಿ ತಾಯಿ ಶವದ ಪಕ್ಕದಲೇ 7 ವರ್ಷದ ಬಾಲಕ 3 ದಿನ ಕಳೆದಿದ್ದಾನೆ. ಪಂಜಾಬ್ ನ ಮೊಹಾಲಿ ಪ್ರಾಂತ್ಯದಲ್ಲಿ ಜಸ್ವಂಧರ್ ಕೌರ್ ಎಂಬ ಮಹಿಳೆ ಮನೆಯ ಹಾಲ್ ನಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಯುವ ಮೊದಲು ತನ್ನ ಪುತ್ರನಿಗೆ ವಿಷಯವನ್ನು ಯಾರಿಗೂ ಹೇಳದಂತೆ ತಿಳಿಸಿದ್ದಾರೆ. ಬಾಲಕ 3 ದಿನಗಳ ಕಾಲ ಬಿಸ್ಕೆಟ್ ತಿಂದು ಅಮ್ಮನ ಮೃತದೇಹದ ಮಗ್ಗುಲಲ್ಲೇ ಕಾಲ ಕಳೆದಿದ್ದಾನೆ. ಆತ ಮನೆಯಿಂದ ಹೊರಗೆ ಬಂದಿದ್ದನಾದರೂ ಯಾರಿಗೂ ವಿಷಯವನ್ನು ತಿಳಿಸಿರಲಿಲ್ಲ.

3 ದಿನಗಳ ಬಳಿಕ ಜಸ್ವಿಂಧರ್ ಕೌರ್ ಸ್ನೇಹಿತೆ ರಣಬೀರ್ ಕೌರ್ ಮನೆಗೆ ಆಗಮಿಸಿದ್ದು, ಮನೆಯಲ್ಲಿ ದುರ್ವಾಸನೆ ಬೀರುತ್ತಿದ್ದ ಕಾರಣ ಒಳಗೆ ಹೋಗಿದ್ದಾರೆ. ಗೆಳತಿಯ ಮೃತದೇಹ, ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳನ್ನು ಕಂಡು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಪೊಲೀಸರಿಗೆ ವಿಷಯ ತಿಳಿಸಲಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಿಸಿದಾಗ ಬಾಲಕ ನಡೆದ ಘಟನೆಯನ್ನು ವಿವರಿಸಿದ್ದಾನೆ. ಜಸ್ವಂಧರ್ ಕೌರ್ ಪತಿ ಸೇನೆಯಲ್ಲಿದ್ದು, ಅವರಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...