alex Certify
ಕನ್ನಡ ದುನಿಯಾ       Mobile App
       

Kannada Duniya

ಹಣವಿದ್ದ ಬ್ಯಾಗನ್ನು ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ 7 ವರ್ಷದ ಬಾಲಕ

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿದೆ. ಆದರೆ ಸಮಾಜದಲ್ಲಿ ಇನ್ನೂ ಪ್ರಾಮಾಣಿಕತೆ ಉಳಿದಿದೆ ಎಂಬುದಕ್ಕೆ ಉದಾಹರಣೆಯಾಗಿ ಹಲವು ಪ್ರಕರಣಗಳು ನಡೆದಿವೆ. ಇಂಥದ್ದೇ ಅಪರೂಪದ ಘಟನೆಯೊಂದರ ವರದಿ ಇಲ್ಲಿದೆ.

ತಮಿಳುನಾಡಿನ ಈರೋಡ್ ಜಿಲ್ಲೆಯ ಚಿನ್ನಾಸೆಮೂರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಪಂಚಾಯತ್ ಯೂನಿಯನ್ ಮಿಡಲ್ ಸ್ಕೂಲ್ ನಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಏಳು ವರ್ಷದ ಬಾಲಕನೊಬ್ಬ ತನಗೆ ಸಿಕ್ಕ 50 ಸಾವಿರ ರೂ. ಗಳಿದ್ದ ಬ್ಯಾಗನ್ನು ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.

ಬುಧವಾರದಂದು ಬಾಲಕ ಮಹಮ್ಮದ್ ಯಾಸೀನ್ ಮೂತ್ರ ವಿಸರ್ಜನೆಗೆಂದು ಹೋದ ವೇಳೆ ಬ್ಯಾಗೊಂದನ್ನು ಕಂಡಿದ್ದಾನೆ. ಅದನ್ನು ತೆರೆದು ನೋಡಿದಾಗ ಹಣವಿರುವುದು ಕಂಡು ಬಂದಿದ್ದು, ಇದರ ಲೆಕ್ಕಾಚಾರದ ಅರಿವಿಲ್ಲದ ಮುಗ್ಧ ಬಾಲಕ ನೇರವಾಗಿ ಅದನ್ನು ತೆಗೆದುಕೊಂಡು ಹೋಗಿ ತನ್ನ ಶಿಕ್ಷಕರಿಗೆ ನೀಡಿದ್ದಾನೆ.

ಬಡ ಕುಟುಂಬದ ಹಿನ್ನಲೆಯಿರುವ ಮಹಮ್ಮದ್ ಯಾಸೀನ್ ಹಣ ತಂದುಕೊಟ್ಟಿದ್ದನ್ನು ಕಂಡ ಶಿಕ್ಷಕರು ಆತನ ಪ್ರಾಮಾಣಿಕತೆಗೆ ಬೆರಗಾಗಿದ್ದಾರೆ. ಕೂಡಲೇ ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ಆತನನ್ನು ಕರೆದೊಯ್ದಿದ್ದು ಅವರೂ ಸಹ ಬಾಲಕನ ನಡವಳಿಕೆ ಮೆಚ್ಚಿ 2,500 ರೂ. ಬಹುಮಾನ ಕೊಡಲು ಮುಂದಾಗಿದ್ದಾರೆ. ಆದರೆ ಬಾಲಕ ಯಾವುದೇ ಕಾರಣಕ್ಕೂ ಇದನ್ನು ಪಡೆಯಲು ಒಪ್ಪಿಲ್ಲ.

ಈತನ ಸ್ವಾಭಿಮಾನಕ್ಕೆ ಮಣಿದ ಜಿಲ್ಲಾ ರಕ್ಷಣಾಧಿಕಾರಿಗಳು, ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕನ ಸಹೋದರನಿಗೆ ಶೂ, ಸ್ಕೂಲ್ ಬ್ಯಾಗ್ ಕೊಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...