alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣಾ ಸಂದರ್ಭದಲ್ಲೇ ಬಿಜೆಪಿಗೆ ಶಾಕ್: ‘ಕೈ’ ಹಿಡಿಯಲು ಸಜ್ಜಾದ ಶಾಸಕ

ರಾಜಸ್ತಾನ ಬಿಜೆಪಿಯ ಪ್ರಭಾವಿ‌ ನಾಯಕ ಜಸ್ವಂತ್ ಸಿಂಗ್ ಪುತ್ರ ಹಾಗೂ ಶಾಸಕ ಮನ್ವೇಂದ್ರ ಸಿಂಗ್‌ ಕಮಲ ಬಿಟ್ಟು ಕೈ ಹಿಡಿಯಲು ಸಜ್ಜಾಗಿದ್ದಾರೆ.

ಇಂದು ದೆಹಲಿಯಲ್ಲಿ‌ ಎಐಸಿಸಿ‌ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್‌ ಪೈಲೆಟ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿರುವ ಮನ್ವೇಂದ್ರ ಸಿಂಗ್, ಅವರ ನಡೆಯನ್ನು ಕಾಂಗ್ರೆಸ್ ಸ್ವಾಗತಿಸಿದರೆ, ಇತ್ತ ಬಿಜೆಪಿ ರಾಜಕೀಯವಾಗಿ ಕೆಟ್ಟ ನಡೆ ಎಂದಿದೆ.

2013ರಲ್ಲಿ ರಾಜಸ್ತಾನದ ಬಾರ್ಮರ್ ಶಿಯೋ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದ 54 ವರ್ಷದ ಮನ್ವೇಂದ್ರ ಸಿಂಗ್, ಬಿಜೆಪಿಯ‌‌ ಕಮಲ ಚಿಹ್ನೆ ಇಟ್ಟುಕೊಂಡು ಮತ್ತೊಮ್ಮೆ ಚುನಾವಣೆಗೆ ಹೋಗುವುದು ನನ್ನ ಪಾಲಿಗೆ ಕೆಟ್ಟ ನಿರ್ಧಾರ ಎಂದಿದ್ದಾರೆ. ಕಾಂಗ್ರೆಸ್, ರಾಜ್ಯದಲ್ಲಿರುವ ರಜಪೂತ್ ಮತಗಳನ್ನು ಸೆಳೆಯಲು ಸಿಂಗ್ ರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದೆ ಎನ್ನಲಾಗಿದೆ.

ಸಚಿನ್ ಪೈಲೆಟ್ ಮಾತನಾಡಿದ್ದು, ಮನ್ವೇಂದ್ರ ಸಿಂಗ್ ರೀತಿ ಬಿಜೆಪಿಯಲ್ಲಿ ರೋಸಿ ಕಾಂಗ್ರೆಸ್ ನತ್ತ ಇನ್ನು ಕೆಲ ಶಾಸಕರು ಬರಲಿದ್ದಾರೆ‌. ಸಾಲು ಸಾಲು ನಾಯಕರು ಬಿಡಲು‌ ಕಾರಣ ಏನೆಂದು ಬಿಜೆಪಿಯವರು ಅವಲೋಕನ ನಡೆಸಬೇಕಿದೆ ಎಂದಿದ್ದಾರೆ. ರಾಜಸ್ತಾನ ಸಂಸದೀಯ ವ್ಯವಹಾರಗಳ ಸಚಿವ ರಾಜೇಂದ್ರ ರಾಥೋಡ್ ಮಾತನಾಡಿ, ಮನ್ವೇಂದ್ರ ಸಿಂಗ್ ಅವರದ್ದು ವೈಯಕ್ತಿಕ ‌ನಿರ್ಧಾರ. ಆದರೆ ಕಾಂಗ್ರೆಸ್ ಸೇರುವ ಮೂಲಕ ದೊಡ್ಡ ತಪ್ಪು ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ನಾಯಕರ ಕೊರತೆ ಇರುವುದರಿಂದ ಈ ರೀತಿ ಮಾಡುತ್ತಿದ್ದಾರೆ. ಮನ್ವೇಂದ್ರ ಸಿಂಗ್ ಪಕ್ಷ‌ ಬಿಡುವುದರಿಂದ ಬಿಜೆಪಿಯ ಮತಗಳಿಗೆ ತೊಂದರೆ ಇಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...