alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ದುರಸ್ತಿಯ ಬಿಲ್ ನೋಡಿ ಬೆಚ್ಚಿಬಿದ್ದ ಗ್ರಾಹಕ

ಕಾರು ಮಾಲೀಕರು ಸಾಮಾನ್ಯವಾಗಿ ತಮ್ಮ ನೆಚ್ಚಿನ ಸರ್ವಿಸ್ ಸೆಂಟರ್ ಗಳನ್ನ ಕೊಂಚ ಹೆಚ್ಚೇ ನಂಬಿರುತ್ತಾರೆ. ಆದ್ರೆ ಎಲ್ಲಾ ಕಾರುಗಳ ಮಾಲೀಕರನ್ನೂ ಸರ್ವಿಸ್ ಸೆಂಟರ್ ಸಿಬ್ಬಂದಿ ಒಂದೇ ತೆರನಾಗಿ ಟ್ರೀಟ್ ಮಾಡ್ತಾರೆ ಅಂತ ಹೇಳೋದಕ್ಕೆ ಆಗೋದಿಲ್ಲ. ಕೆಲವು ಸರ್ವಿಸ್ ಸೆಂಟರ್ ಗಳು ಗ್ರಾಹಕರ ವಿಶ್ವಾಸವನ್ನು ಕೆಡಿಸಿಕೊಳ್ಳುವ ಕೆಲಸಗಳನ್ನ ಮಾಡಿಬಿಡ್ತವೆ. ಮುಂಬೈನಲ್ಲಿ ಇಂತದ್ದೇ ಒಂದು ಘಟನೆ ನಡೆದಿದೆ.

ಮುಂಬೈನ ವಿ.ಹೆಚ್.ಪಿ. ಮುಖಂಡ ನವೀನ್ ಎಂಬುವರ ಸ್ನೇಹಿತರಿಗೆ ಈ ಬಗ್ಗೆ ಇತ್ತೀಚೆಗಷ್ಟೆ ಇಂತಹ ಅನುಭವವಾಗಿದೆ. ಮುಂಬೈನ ಸ್ಕೋಡಾ ಕಾರುಗಳ ಸರ್ವಿಸ್ ಸೆಂಟರ್ ಒಂದು ಕಾರಿನ ಸರ್ವಿಸ್ ಮಾಡಿಸಿದ್ದಕ್ಕೆ 1ಲಕ್ಷ 68 ಸಾವಿರ ರೂಪಾಯಿ ಬಿಲ್ ನೀಡಿದೆ. ಇದರಲ್ಲಿ 1 ಲಕ್ಷದ 43 ಸಾವಿರ ರೂಪಾಯಿ ಬಿಡಿ ಭಾಗಗಳ ಚಾರ್ಜ್ ಆದ್ರೆ 25 ಸಾವಿರ ರೂಪಾಯಿ ಲೇಬರ್ ಚಾರ್ಜ್ ಆಗಿದೆ.

ಕಾರು ಸ್ಟಾರ್ಟ್ ಆಗ್ತಿಲ್ಲ ಅಂತ ಸರ್ವಿಸ್ ಸೆಂಟರ್ ಗೆ ಬಿಟ್ಟಿದ್ದಕ್ಕೆ ಬರೋಬ್ಬರಿ 1 ಲಕ್ಷದ 68 ಸಾವಿರ ಬಿಲ್ ಚಾರ್ಜ್ ಮಾಡಿದ್ದಾರೆ. ಇದೇ ಸರ್ವಿಸ್ ಬಗ್ಗೆ ಮತ್ತೊಂದು ಸ್ಥಳದಲ್ಲಿ ವಿಚಾರಿಸಿದಾಗ ಕೇವಲ 1000 ರೂಪಾಯಿಯ ಕೆಲಸ ಅದು ಅನ್ನೋ ಅಭಿಪ್ರಾಯ ಬಂದಿದೆಯಂತೆ. ಬಿಲ್ ನೋಡಿ ದಂಗಾದ ಗ್ರಾಹಕರು ಸರ್ವಿಸ್ ಸೆಂಟರ್ ಸಿಬ್ಬಂದಿಯನ್ನ ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...