alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀನಗರದಲ್ಲಿ ಪಾಕ್ ರಾಷ್ಟ್ರೀಯ ದಿನ ಆಚರಿಸಿದ ಮಹಿಳೆ

ಪ್ರತ್ಯೇಕತಾವಾದಿ ಹಾಗೂ ದುಖ್ತರನ್ ಇ ಮಿಲ್ಲೆಟ್ ಉಗ್ರ ಸಂಘಟನೆಯ ಮುಖ್ಯಸ್ಥೆ ಅಸಿಯಾ ಅಂದ್ರಾಬಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಪಾಕಿಸ್ತಾನ ರಾಷ್ಟ್ರೀಯ ದಿನವನ್ನು ಆಚರಿಸಿದ್ದಾಳೆ. ಎಲ್ಲಾ ಮುಸ್ಲಿಂ ಉಪಖಂಡಗಳೂ ಪಾಕಿಸ್ತಾನಕ್ಕೆ ಸೇರಿದ್ದು ಅಂತಾ ಹೇಳಿದ್ದಾಳೆ.

ಕಾರ್ಯಕ್ರಮದಲ್ಲಿ ಅಸಿಯಾ ತನ್ನ ಬೆಂಬಲಿಗರೊಂದಿಗೆ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಿದ್ದಾಳೆ. ಶ್ರೀನಗರದ ಗುಪ್ತ ಸ್ಥಳದಲ್ಲಿ ಈ ಕಾರ್ಯಕ್ರಮ ನಡೆದಿದೆ. ಪ್ರತಿ ವರ್ಷ ಮಾರ್ಚ್ 23ನ್ನು ಪಾಕಿಸ್ತಾನದಲ್ಲಿ ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ.

ಈ ಬಾರಿ ಪಾಕಿಸ್ತಾನ 78ನೇ ರಾಷ್ಟ್ರೀಯ ದಿನ ಆಚರಿಸಿಕೊಂಡಿದೆ. ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. 2017ರಲ್ಲಿ ಭಾರತದ ಮೇಲೆ ದಾಳಿ ಮಾಡಲು ಅಸಿಯಾ ಪಾಕಿಸ್ತಾನದ ಉಗ್ರರೊಂದಿಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಉಗ್ರ ಹಫೀಜ್ ಸಯೀದ್ ನನ್ನು ತನ್ನ ಸಹೋದರ ಎಂದು ಕರೆದಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...