alex Certify
ಕನ್ನಡ ದುನಿಯಾ       Mobile App
       

Kannada Duniya

60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ

ಉತ್ತರ ಪ್ರದೇಶ ಸರ್ಕಾರ ಇನ್ನೊಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ 60ಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರು ಉಚಿತವಾಗಿ ಉತ್ತರ ಪ್ರದೇಶದ ಸರ್ಕಾರಿ ಬಸ್ ನಲ್ಲಿ ಸಂಚರಿಸಬಹುದಾಗಿದೆ. ಮಹಿಳೆಯರು ಯಾವುದೇ ಟಿಕೆಟ್ ನೀಡದೆ ಸಾಮಾನ್ಯ ಸರ್ಕಾರಿ ಬಸ್ ನಲ್ಲಿ ಸಂಚರಿಸಬಹುದು.

ಸುಮಾರು 19 ಸಾವಿರಕ್ಕೂ ಹೆಚ್ಚು ಸಾಮಾನ್ಯ ಸರ್ಕಾರಿ ಬಸ್ ನಲ್ಲಿ ಮಹಿಳೆಯರು ಟಿಕೆಟ್ ಇಲ್ಲದೆ ಸಂಚರಿಸಬಹುದಾಗಿದೆ. ಸೆಪ್ಟೆಂಬರ್ ಕೊನೆಯೊಳಗೆ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಮೊದಲು ಈ ಸೌಲಭ್ಯ ನೀಡಲಾಗ್ತಾ ಇತ್ತು. ಈಗ ಯೋಜನೆ ವಿಸ್ತರಣೆ ಮಾಡಲಾಗಿದ್ದು, 60 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರೂ ಇದ್ರ ಲಾಭ ಪಡೆಯಲಿದ್ದಾರೆ.

ಮಹಿಳಾ ಮತ್ತು ಮಕ್ಕಳ ಇಲಾಖೆ ಈ ಯೋಜನೆ ಜಾರಿಗೆ ತಂದಿದ್ದು, ಸದ್ಯ ಸಾಮಾನ್ಯ ಬಸ್ ನಲ್ಲಿ ಮಾತ್ರ ಉಚಿತ ಸಂಚಾರ ಲಭ್ಯವಾಗಲಿದೆ. ನಂತ್ರ ವೊಲ್ವೋ, ಶತಾಬ್ದಿಗೆ ವಿಸ್ತರಿಸುವ ಚಿಂತನೆ ಮಾಡಲಾಗುವುದು. ಮಹಿಳೆಯರು ವಯಸ್ಸಿನ ದಾಖಲೆ ನೀಡಿ, ಫೋಟೋ ನೀಡಿ ಕಾರ್ಡ್ ಮಾಡಿಕೊಳ್ಳಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...