alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಯ್ಲೆಟ್ ಗುಂಡಿ ಸ್ವಚ್ಚಗೊಳಿಸಿದ ಐಎಎಸ್ ಅಧಿಕಾರಿ

ias-officerಐಎಎಸ್ ಅಧಿಕಾರಿಗಳು ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವುದಿಲ್ಲವೆಂಬ ಭಾವನೆ ಇದೆ. ಆದರೆ ಎಲ್ಲ ಅಧಿಕಾರಿಗಳು ಈ ರೀತಿ ಇರುವುದಿಲ್ಲವೆಂಬುದಕ್ಕೆ ಈ ಹಿರಿಯ ಐಎಎಸ್ ಅಧಿಕಾರಿ ಉದಾಹರಣೆಯಾಗಿದ್ದಾರೆ. ಸ್ವತಃ ತಾವೇ ಟಾಯ್ಲೆಟ್ ಗುಂಡಿಗಿಳಿದು ಸ್ವಚ್ಚಗೊಳಿಸುವ ಮೂಲಕ ತಾವೆಷ್ಟು ವಿಭಿನ್ನವೆಂದು ಸಾಬೀತುಪಡಿಸಿದ್ದಾರೆ.

ಕೇಂದ್ರ ನೀರು ಮತ್ತು ಒಳ ಚರಂಡಿ ಮಂಡಳಿ ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್, ಫೆಬ್ರವರಿ 18 ರಂದು ತೆಲಂಗಾಣದ ವಾರಂಗಲ್ ಜಿಲ್ಲೆಯ ಗಂಗಾದೇವಿಪಳ್ಳಿ ಎಂಬ ಗ್ರಾಮಕ್ಕೆ 40 ಕ್ಕೂ ಅಧಿಕ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಕೈಗೆ ಗ್ಲೌಸ್ ಕೂಡ ಧರಿಸದೆ ಟಾಯ್ಲೆಟ್ ಗುಂಡಿಗಿಳಿದ ಅವರು, ಅದನ್ನು ಸ್ವಚ್ಚಗೊಳಿಸಲು ಆರಂಭಿಸಿದರು. ಇದನ್ನು ನೋಡಿ ಕ್ಷಣ ಕಾಲ ಅವಾಕ್ಕಾದ ಇತರೆ ಅಧಿಕಾರಿಗಳು ಅನಿವಾರ್ಯವಾಗಿ ಅವರೊಂದಿಗೆ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಭಾನುವಾರದಂದು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ, ‘ಮನ್ ಕೀ ಬಾತ್’ ನಲ್ಲಿ ಮಾತನಾಡುವ ವೇಳೆ ಈ ವಿಚಾರ ಪ್ರಸ್ತಾಪಿಸಿದ್ದರು. ಒಬ್ಬ ಅಧಿಕಾರಿ ಇಂತಹ ಕಾರ್ಯ ಮಾಡುವ ಮೂಲಕ ಹೇಗೆ ಇತರರಿಗೆ ಮಾದರಿಯಾಗಿದ್ದಾರೆ ಎಂಬುದನ್ನು ಹೇಳಿದ ಮೋದಿ, ಸ್ವಚ್ಚ ಭಾರತ ಕನಸಿಗೆ ಇಂತಹ ಕಾರ್ಯಗಳು ಪೂರಕ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...