alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಹಾರಾಟಕ್ಕೂ ಮುನ್ನ ಮದ್ಯ ಸೇವಿಸಿ ಸಿಕ್ಕಿಬಿದ್ದ ಕ್ಯಾಪ್ಟನ್

ಮುಂಬೈ: ಏರ್ ಇಂಡಿಯಾದ ಕ್ಯಾಪ್ಟನ್ ಎ.ಕೆ. ಕಟ್ಪಾಲಿಯಾ ಎಂಬುವರು ವಿಮಾನ ಹಾರಾಟಕ್ಕೂ ಮುನ್ನ ನಡೆಸಿದ ಮದ್ಯ ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.

ಏರ್ ಇಂಡಿಯಾದ ಎಐ-111 ವಿಮಾನದಲ್ಲಿ ದೆಹಲಿ-ಲಂಡನ್ ಗೆ ಭಾನುವಾರ ಮಧ್ಯಾಹ್ನ ಪ್ರಯಾಣಿಸಬೇಕಿತ್ತು. ವಿಮಾನ ಹಾರಾಟಕ್ಕೂ 12 ಗಂಟೆ ಮುನ್ನ ಹಾಗೂ ಹಾರಾಟ ಮುಗಿದ ತಕ್ಷಣ ಅಧಿಕಾರಿಗಳು ಮದ್ಯ ಸೇವನೆ ಪರೀಕ್ಷೆ ನಡೆಸುವುದು ಕಡ್ಡಾಯ.

ಹೀಗೆ ಪರೀಕ್ಷಿಸಿದಾಗ ಕ್ಯಾಪ್ಟನ್ ಕಟ್ಪಾಲಿಯಾ ಮದ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಆದರೆ, ಇನ್ನೊಂದು ಅವಕಾಶವನ್ನು ಅಧಿಕಾರಿಗಳು ನೀಡಿ, ಪುನಃ ಪರೀಕ್ಷೆ ನಡೆಸಿದಾಗಲೂ ವಿಫಲರಾಗಿದ್ದಕ್ಕೆ ಅವರನ್ನು ತಕ್ಷಣವೇ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

2017ರಲ್ಲೂ ವಿವಾದ ಮಾಡಿಕೊಂಡಿದ್ದ ಕ್ಯಾಪ್ಟನ್ ಕಟ್ಪಾಲಿಯಾ ವಿಮಾನ ಹಾರಾಟಕ್ಕೆ ಮುನ್ನ ಪರೀಕ್ಷೆಗೊಳಪಡದೇ ಹಾರಾಟ ನಡೆಸಿದ್ದರು. ಈ ಸಂಬಂಧ ಅವರ ಪರವಾನಗಿಯನ್ನು 3 ತಿಂಗಳ ಕಾಲ ಅಮಾನತಿನಲ್ಲಿಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...