alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲ ಕೆರಳಿಸಿದೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ನಡೆ

ನವದೆಹಲಿ: ಲೋಕಸಭೆಯಲ್ಲಿ ನಡೆಯಲಿರುವ ಅವಿಶ್ವಾಸ ಮಂಡನೆಯಲ್ಲಿ ಶಿವಸೇನೆ, ಬಿಜೆಪಿ ಪರವಾಗಿಯೇ ನಿಲ್ಲಲಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ನಡೆಯಲಿರುವ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಎನ್‌ಡಿಎಗೆ ಗೆಲುವು ಖಚಿತ. ಶಿವಸೇನೆ, ಕಾಂಗ್ರೆಸ್‌ ವಿರುದ್ಧ ಮತ ಚಲಾಯಿಸುತ್ತದೆ ಎಂದು ಅನಂತ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೇಂದ್ರ ಸರಕಾರಕ್ಕೆ ಲೋಕಸಭೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ 313 ಮಂದಿ ಇದ್ದು, ಈ ಪೈಕಿ 274 ಸೀಟುಗಳು ಬಿಜೆಪಿ ಮತ್ತದರ ಮಿತ್ರಪಕ್ಷದ್ದೇ ಇವೆ. 264 ಸೀಟುಗಳನ್ನು ಖಚಿತಪಡಿಸುವುದು ಎನ್‌ಡಿಎಗೆ ಯಾವುದೇ ಸಮಸ್ಯೆಯನ್ನು ಒಡ್ಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಶಿವಸೇನೆಯ 18 ಮಂದಿ ಅವಿಶ್ವಾಸ ನಿರ್ಣಯದಲ್ಲಿ ಸರಕಾರದ ವಿರುದ್ಧ ನಿಲ್ಲುವ ವಿಶ್ವಾಸದಲ್ಲಿ ವಿಪಕ್ಷಗಳಿದ್ದು, ಶುಕ್ರವಾರ ಮೋದಿ ಸರಕಾರದ ಪಾಲಿಗೆ ಅಗ್ನಿ ಪರೀಕ್ಷೆ ಕುತೂಹಲ ಕೆರಳಿಸಿದೆ. ಆದರೆ ಈ ಸಂಬಂಧ ಶಿವಸೇನೆ ತನ್ನ ಗುಟ್ಟು ಬಿಟ್ಟು ಕೊಡದೇ ಇರುವುದು ಇನ್ನಷ್ಟು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...