alex Certify
ಕನ್ನಡ ದುನಿಯಾ       Mobile App
       

Kannada Duniya

ನಿಜವಾಗಿಯೂ ವಾಜಪೇಯಿ ನಿಧನರಾಗಿದ್ದು ಯಾವಾಗ…?

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನ ವಿಷಯ ಬಹಿರಂಗಪಡಿಸಿದ ವಿಚಾರದಲ್ಲಿ ಶಿವಸೇನೆ ತಗಾದೆ ತೆಗೆದಿದೆ.

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ವಾಜಪೇಯಿ ಅವರ ಮರಣ ಸಂಗತಿಯನ್ನು ಆಗಸ್ಟ್ 15 ರಂದು ಬಹಿರಂಗಪಡಿಸಲಾಗಿಲ್ಲ ಎಂಬ ಅನುಮಾನವನ್ನು ಶಿವಸೇನೆ ರಾಜ್ಯಸಭಾ ಸದಸ್ಯ ಸಂಜಯ್‌ ರಾವತ್‌ ವ್ಯಕ್ತಪಡಿಸಿದ್ದಾರೆ.

ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ಲೇಖನ ಬರೆದಿರುವ ಅವರು, ತಮ್ಮ ಅನುಮಾನಕ್ಕೆ ಸ್ಪಷ್ಟಕಾರಣ ತಿಳಿಸಿಲ್ಲ. ಆ.15 ರಂದು ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣ ಇದ್ದ ಕಾರಣ, ಅಟಲ್‌ ಸಾವಿನ ಸುದ್ದಿಯನ್ನು ಆ.16 ರಂದು ಬಹಿರಂಗಪಡಿಸಿರುವ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಸ್ವರಾಜ್ಯ ಎಂದರೇನು ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ, ಆ.12-13 ರ ವೇಳೆಗೆ ವಾಜಪೇಯಿ ಆರೋಗ್ಯ ಚಿಂತಾಜನಕವಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳು ಹಾಗೂ ಆ ಸಂದರ್ಭದಲ್ಲಿ ಶೋಕಾಚರಣೆ ಮಾಡುವುದನ್ನು ತಪ್ಪಿಸಲೆಂದು ಆ.16 ರಂದು ವಾಜಪೇಯಿ ನಿಧನರಾಗಿದ್ದಾರೆ ಎಂದು ಬಹಿರಂಗಪಡಿಸಿರಬಹುದು ಎಂದು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...