alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ನಲ್ಲಿ ಕೋಟ್ ಮಾರಾಟಕ್ಕಿಟ್ಟು ಸಂಕಷ್ಟಕ್ಕೀಡಾದ ಮಹಿಳೆ

ಆನ್ಲೈನ್ ನಲ್ಲಿ ಕೋಟ್ ಫೋಟೋ ಹಾಕಿದ್ದು ಮಹಿಳೆಗೆ ದುಬಾರಿಯಾಗಿ ಪರಿಣಮಿಸಿದೆ. ಘಟನೆ ದೆಹಲಿ ಗ್ರೇಟರ್ ಕೈಲಾಶ್ ನಲ್ಲಿ ನಡೆದಿದೆ. ಮಹಿಳೆ ಕೋಟ್ ಫೋಟೋವನ್ನು ಪೋರ್ಟಲ್ ಒಂದಕ್ಕೆ ಹಾಕಿದ್ದಳು. ಕೋಟ್ ಮಾರಾಟ ಮಾಡ್ತಿರುವ ಬಗ್ಗೆ ಜಾಹೀರಾತು ನೀಡಿದ್ದಳು.

ಮಹಿಳೆ ಕೋಟ್ ಖರೀದಿಗೆ ಅನೇಕರು ಮುಂದೆ ಬಂದಿದ್ದರು ಎನ್ನಲಾಗಿದೆ. ಯುವಕನೊಬ್ಬ ಮಹಿಳೆ ಕೋಟ್ ಖರೀದಿಗೆ ಆಸಕ್ತಿ ತೋರಿದ್ದಾನೆ. ಹೆಚ್ಚು ಹಣ ನೀಡುವುದಾಗಿ ಆಸೆ ತೋರಿಸಿದ್ದಾನೆ. ಇದೇ ಕಾರಣಕ್ಕೆ ಇಬ್ಬರು ಪೋರ್ಟಲ್ ಮೂಲಕವೇ ಚಾಟ್ ಮಾಡಿದ್ದಾರೆ. ಯುವಕ ಆಸಕ್ತಿ ತೋರಿದ್ದರಿಂದ ಮಹಿಳೆ ನಂಬರ್ ನೀಡಿದ್ದಾಳೆ.

ಆ ನಂತ್ರ ವಾಟ್ಸಾಪ್ ಕಾಲ್ ಮಾಡಲು ಶುರು ಮಾಡಿದ ಯುವಕ ವಿಡಿಯೋ ಕಾಲಿಂಗ್ ಗೆ ಒತ್ತಾಯ ಮಾಡ್ತಿದ್ದ ಎನ್ನಲಾಗಿದೆ. ಶಾರೀರಿಕ ಸಂಬಂಧ ಬೆಳೆಸಿದ್ರೆ ಹೆಚ್ಚು ಮೊತ್ತ ನೀಡಿ ಕೋಟ್ ಖರೀದಿ ಮಾಡುತ್ತೇನೆಂದು ಹೇಳಿದ್ದಾನೆ. ಮಹಿಳೆ ಇದನ್ನು ನಿರಾಕರಿಸಿದ್ದಾಳೆ. ಆದ್ರೆ ವ್ಯಕ್ತಿ ಮಾತ್ರ ಬೆನ್ನು ಬಿಡಲಿಲ್ಲ. ಆತನಿಂದ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...