alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನ ಸಾವಿಗೆ ಕಾರಣವಾಯ್ತು ರೈಲಿನ ಜೊತೆಗಿನ ಸೆಲ್ಫಿ

train-story-fb_647_020116104408

ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿನಲ್ಲಿ ಆಪಾಯಕಾರಿ ಸಾಹಸಕ್ಕೆ ಮುಂದಾಗಿ ದುರಂತ ಸಾವು ಕಾಣುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಂತಹುದೇ ಮತ್ತೊಂದು ಪ್ರಕರಣ ಚೆನ್ನೈನಲ್ಲಿ ನಡೆದಿದೆ.

ಚಲಿಸುತ್ತಿರುವ ರೈಲನ್ನು ಹಿನ್ನಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳಲು ಮುಂದಾದ 16 ವರ್ಷದ ಶಾಲಾ ಬಾಲಕನೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಚೆನ್ನೈನ ಪೂಂತಮಲ್ಲಿ ನಿವಾಸಿಯಾದ ಈ ಬಾಲಕ ಸ್ನೇಹಿತರೊಂದಿಗೆ ಪಾರ್ಕಿಗೆ ತೆರಳಿದ್ದ.

ವಾಪಾಸ್ ಇವರುಗಳು ಮನೆಗೆ ತೆರಳುತ್ತಿದ್ದ ವೇಳೆ ವಂಡಲೂರು ರೈಲು ನಿಲ್ದಾಣದ ಬಳಿ ಚೆನ್ನೈ ಬೀಚ್ ಹಾಗೂ ಚೆಂಗಲ್ ಪಟ್ಟು ಮಾರ್ಗದ ಎಲೆಕ್ಟ್ರಿಕ್ ಟ್ರೈನ್ ಬರುತ್ತಿರುವುದು ಕಂಡಿದೆ. ಈ ಸಂದರ್ಭದಲ್ಲಿ ಬಾಲಕ ರೈಲನ್ನು ಹಿನ್ನಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಹಳಿಗಳ ಮೇಲೆ ಇದಕ್ಕಾಗಿ ನಿಂತಿದ್ದಾಗ ವೇಗವಾಗಿ ಬಂದ ರೈಲು ಆತನ ಮೇಲೆ ಹರಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...