alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ಕ್ರೇಜ್ ಗೆ ಬಲಿಯಾಯ್ತು ಮತ್ತೊಂದು ಜೀವ

ಹೈದ್ರಾಬಾದ್ ನ ಮಜಿದ್ಪುರ ಗ್ರಾಮದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ನೀರು ಪಾಲಾಗಿದ್ದಾನೆ. ಶ್ರೀನಿವಾಸ್ ಕೃಷ್ಣ ಅಭಿಷೇಕ್ ಮೃತಪಟ್ಟ ಯುವಕ.

ಸಿಎಂಆರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಶ್ರೀನಿವಾಸ್, ಕ್ಲಾಸ್ ಬಂಕ್ ಮಾಡಿ ಗೆಳತಿಯ ಜೊತೆಗೆ ಬಂದಿದ್ದ. ಕಾಲೇಜು ಸಮೀಪದಲ್ಲೇ ಇದ್ದ ಕೆರೆಯ ಬಳಿ ಬಂದಿದ್ದ ಇಬ್ಬರೂ, ಅಂಚಿನಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ರು. ಈ ವೇಳೆ ಕಾಲು ಜಾರಿ ಶ್ರೀನಿವಾಸ್ ನೀರಿಗೆ ಬಿದ್ದಿದ್ದಾನೆ. ಕೂಡಲೇ ಆತನ ಗೆಳತಿ ಸುತ್ತಮುತ್ತ ಇದ್ದ ಜನರ ಬಳಿ ಧಾವಿಸಿ ಸಹಾಯ ಕೇಳಿದ್ಲು. ಗ್ರಾಮಸ್ಥರು ಕೂಡ ಆತನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.

ಆದ್ರೆ ಅಷ್ಟರಲ್ಲಾಗ್ಲೇ ಶ್ರೀನಿವಾಸ್ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಆತನ ಮೊಬೈಲ್ ಕೂಡ ಪತ್ತೆಯಾಗಿಲ್ಲ. ಹಲವು ಗಂಟೆಗಳ ಶೋಧದ ಬಳಿಕ ಶ್ರೀನಿವಾಸ್ ಮೃತದೇಹ ಪತ್ತೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...