alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೆ ಹತ್ತೇ ಹತ್ತು ದಿನ ಇತ್ತು ಅಷ್ಟೇ

selfi mng

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್. ಅದರಲ್ಲಿಯೂ ಸ್ಮಾರ್ಟ್ ಫೋನ್ ಗಳದೇ ಸಿಂಹಪಾಲು. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ರೆ ಕೇಳ್ಬೇಕಾ, ಕಂಡ ಕಂಡ ಕಡೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದೇ ಕೆಲಸವಾಗಿಬಿಟ್ಟಿದೆ. ಇತ್ತೀಚೆಗೆ ಸೆಲ್ಫಿ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿಯಾಗಿ ಪೋಟೋ ತೆಗೆದುಕೊಳ್ಳುವ ಭರದಲ್ಲಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅಪಾಯ ಅರಿಯದೇ ಹೆಚ್ಚಿನ ಸಂಖ್ಯೆಯ ಜನ ಜೀವ ಕಳೆದುಕೊಳ್ಳುವ ಇಲ್ಲವೇ, ಅಪಾಯ ತಂದುಕೊಳ್ಳುವ ಅನೇಕ ಪ್ರಕರಣ ವರದಿಯಾಗಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ಇಲ್ಲಿದೆ ನೋಡಿ. ಸೆಲ್ಫಿ ತೆಗೆದುಕೊಳ್ಳುವ ಭರಾಟೆಯಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ರಾಜಸ್ತಾನದಲ್ಲಿ ನಡೆದಿದೆ. ನಿಖಿಲ್ ಪ್ರಜಾಪತಿ ಮೃತಪಟ್ಟ ಯುವಕ. ರಾಜಸ್ತಾನದಲ್ಲಿರುವ ಮೆಹರಾನ್ ಗಢಕ್ಕೆ ತನ್ನ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹೋಗಿದ್ದ ಅವರು ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

ನಿಖಿಲ್ ಪ್ರಜಾಪತಿ ಎತ್ತರದ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲುಜಾರಿ 400 ಅಡಿ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ದುರಂತದ ಸಂಗತಿ ಎಂದರೆ ನಿಖಿಲ್ ಪ್ರಜಾಪತಿ ಮದುವೆಗೆ ಕೇವಲ ಹತ್ತು ದಿನ ಇತ್ತು ಅಷ್ಟೇ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...