alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಯೋಗಿ ನಿವಾಸದ ಬಳಿ ಸೆಲ್ಫಿ ಕ್ಲಿಕ್ಕಿಸಿದ್ರೆ ಜೈಲು

ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸೆಲ್ಫಿ ಕ್ರೇಝ್ ಇದೆ. ಯುವಕರ ಜೊತೆಗೆ, ಚಿಕ್ಕ ಮಕ್ಕಳ ಜೊತೆಗೆ ನಮೋ ಸೆಲ್ಫಿ ಕ್ಲಿಕ್ಕಿಸಿಕೊಳ್ತಾರೆ. ಹಾಗಂತ ನೀವೇನಾದ್ರೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಅಧಿಕೃತ ನಿವಾಸದ ಆಸುಪಾಸಿನಲ್ಲಿ ಸೆಲ್ಫಿ ತೆಗೆದುಕೊಂಡ್ರೆ ಜೈಲು ಸೇರ್ತೀರಾ.

ಲಖ್ನೋನ 5 ಕಾಳಿದಾಸ್ ಮಾರ್ಗ್ ನಲ್ಲಿರೋ ಸಿಎಂ ನಿವಾಸದ ಬಳಿ ಪೊಲೀಸರು ದೊಡ್ಡದೊಂದು ಬ್ಯಾನರ್ ಹಾಕಿದ್ದಾರೆ. ವಿಐಪಿ ಏರಿಯಾದಲ್ಲಿ ಸೆಲ್ಫಿ ಕ್ಲಿಕ್ಕಿಸೋದು ಅಪರಾಧ. ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಸಿಕ್ಕಿಬಿದ್ರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬ್ಯಾನರ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಪೊಲೀಸರ ಈ ಕ್ರಮವನ್ನು ಮಾಜಿ ಸಿಎಂ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಸರ್ಕಾರ ಜನರಿಗೆ ಕೊಟ್ಟಿರೋ ಹೊಸ ವರ್ಷದ ಉಡುಗೊರೆ ಇದು ಅಂತಾ ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಗೊಂಡಿರುವ ಕ್ರಮ ಅಂತಾ ಬಿಜೆಪಿ ಸಮರ್ಥಿಸಿಕೊಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...